HEALTH TIPS

ಭಾರತದ ರಕ್ಷಣಾ ಸಿಬ್ಬಂದಿಗೆ ಪಾಕ್ ಮಹಿಳಾ ಬೇಹುಗಾರರ ಗಾಳ: ಆಂಧ್ರ ಪೊಲೀಸರು

ಅಮರಾವತಿ (ಪಿಟಿಐ): ಸೂಕ್ಷ್ಮ ಮತ್ತು ಗೋಪ್ಯ ಮಾಹಿತಿ ಪಡೆದುಕೊಳ್ಳಲು ಪಾಕಿಸ್ತಾನದ ಮಹಿಳಾ ಬೇಹುಗಾರಿಕೆ ಏಜೆಂಟರು ಭಾರತದ ರಕ್ಷಣಾ ಸಿಬ್ಬಂದಿಯನ್ನೇ ಗುರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆಂಧ್ರ ಪ್ರದೇಶ ಪೊಲೀಸರು ಹೇಳಿದ್ದಾರೆ.


'ಹಣದ ಆಮಿಷ ತೋರಿಸುವುದು, ಹನಿ ಟ್ರ್ಯಾಪ್, ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವುದು ಮತ್ತು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಏಜೆಂಟರು ಸಂಚು ಹೂಡುತ್ತಾರೆ' ಎಂದು ಮಾಹಿತಿ ನೀಡಿದ್ದಾರೆ. 

ಭಾರತದ ವಿರುದ್ಧ ಸಂಚು ರೂಪಿಸುವ ಉದ್ದೇಶದಿಂದ ಇಲ್ಲಿನ ರಕ್ಷಣಾ ಸಂಸ್ಥೆಗಳು, ವ್ಯೂಹಾತ್ಮಕ ಸ್ಥಳಗಳು, ನೌಕಾಪಡೆಯ ಸ್ವತ್ತುಗಳಿಗೆ ಸಂಬಂಧಿಸಿದ ಮಾಹಿತಿ ಕದಿಯುವುದು ಏಜೆಂಟರ ಕೆಲಸ' ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಮೊದಲು ಫೇಸ್‌ಬುಕ್, ಇನ್‌ಸ್ಟಾಗ್ರಾಂ ರೀತಿಯ ಸಾಮಾಜಿಕ ಜಾಲತಾಣಗಳ ಮೂಲಕ ರಕ್ಷಣಾ ಸಿಬ್ಬಂದಿಯನ್ನು ಸಂಪರ್ಕಿಸಲಾಗುತ್ತದೆ. ಒಮ್ಮೆ ಅವರ ವಿಶ್ವಾಸ ಗಳಿಸಿದರೆ, ಈ ಸಂಪರ್ಕವು ಚಾಟ್ಸ್, ಧ್ವನಿ ಕರೆ ಮತ್ತು ವಿಡಿಯೊ ಕರೆಗೆ ಅನುಕೂಲವಾಗುವ ವಾಟ್ಸ್‌ಆಯಪ್‌ಗೆ ಹೊರಳುತ್ತದೆ. ಬಳಿಕ ಹಡಗುಗಳು-ಜಲಾಂತರ್ಗಾಮಿಗಳ ಸಂಚಾರ, ಅವುಗಳ ಸಂಖ್ಯೆ, ಚಿತ್ರಗಳು, ವಿಡಿಯೊಗಳು ಮತ್ತಿತರ ರಕ್ಷಣಾ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಾರೆ' ಎಂದು ಏಜೆಂಟರ ಕಾರ್ಯಾಚರಣೆ ವಿಧಾನವನ್ನು ಉದಾಹರಣೆ ಸಹಿತ ವಿವರಿಸಲಾಗಿದೆ.

'ಕೆಲವೊಮ್ಮೆ ವಾಟ್ಸ್‌ಆಯಪ್ ಒಟಿಪಿ ಪಡೆದುಕೊಂಡು, ಇವರ ವಾಟ್ಸ್‌ಆಯಪ್ ಖಾತೆಯನ್ನು ಪಾಕಿಸ್ತಾನದಲ್ಲಿ ಸಕ್ರಿಯಗೊಳಿಸುತ್ತಾರೆ. ಆ ಮೂಲಕ ಸಂವಹನ ಮುಂದುವರಿಸುವುದು, ಬಲೆಗೆ ಬೀಳಿಸುವ ಕೆಲಸ ಮಾಡುತ್ತಾರೆ' ಎಂದು ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries