ಕಾಸರಗೋಡು: ಫೇಸ್ ಬುಕ್ ಮೂಲಕ ಪರಿಚಯಗೊಂಡಿದ್ದ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ 40ರ ಹರೆಯದ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಪತ್ತನಂತಿಟ್ಟ ನಿವಾಸಿ ಪ್ರೇಮ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಫೇಸ್ಬುಕ್ ಮೂಲಕ ಪರಿಚಯಗೊಂಡ ನಂತರ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇದೇ ಸಲುಗೆಯಲ್ಲಿ ಪ್ರೇಮ್ ಮಹಿಳೆಯ ಅಂಬಲತ್ತರದ ಮನೆಗೆ ಆಗಮಿಸಿದ್ದು, ನಂತರ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರ ಇವರ ಮಧ್ಯೆ ವಿರಸವುಂಟಾಗಿತ್ತು. ಈ ದ್ವೇಷದಲ್ಲಿ ಪ್ರೇಮ್ ತನ್ನ ಮೊಬೈಲಲ್ಲಿದ್ದ ಗೃಹಿಣಿಯ ಚಿತ್ರಗಳನ್ನು ಆಕೆಯ ಪತಿಗೆ ಕಳುಹಿಸಿಕೊಟ್ಟಿದ್ದನು. ಈ ಬಗ್ಗೆ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದರು.


