ಬದಿಯಡ್ಕ: ಬೇಳ ಬಿರ್ಮಿನಡ್ಕ ಸನಿಹದ ಪಡಿಯಡ್ಕ ಎಂಬಲ್ಲಿ ನಡೆಯುತ್ತಿದ್ದ ಕೋಳಿಅಂಕಕ್ಕೆ ದಾಳಿ ನಡೆಸಿದ ಬದಿಯಡ್ಕ ಠಾಣೆ ಪೆÇಲೀಸರು ನಿನ್ನೆ ಸಂಜೆ ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ. ಇವರಿಂದ ಏಳು ಅಂಕದ ಕೋಳಿ ಹಾಗೂ 3800 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂಬ್ರಾಣ ನಿವಾಸಿ ಜಯರಾಮ್, ಕುಂಟಾರಿನ ಪಟ್ಟಾಭಿ ಎಂ, ನೀರ್ಚಾಲಿನ ನಾರಾಯಣ ಎನ್ ಕೆ ಮತ್ತು ಕುಂಬಳೆ ಮುಜಂಗಾವಿನ ಚಂದ್ರ, ಪಳ್ಳಿಕೆರೆ ಪಾಕಂ ನಿವಾಸಿ ಶಶಿ (65), ಪೆರಡಾಲ ಪೀಲಿತ್ತಡ್ಕದ ಪ್ರಜ್ವಲ್, ಪೆರುಂಬಳ ಕೋಳಿಯಡ್ಕದ ಪ್ರಮೋದ್ ಬಂಧಿತರು. ಬದಿಯಡ್ಕ ಠಾಣೆಯ ಎಸ್ಐ ಸುನಿಲ್ ಕುಮಾರ್ ನೇತೃತ್ವದ ಪೆÇಲೀಸರ ತಂಡ ಈ ದಾಳಿ ನಡೆಸಿದೆ. ನಂತರ ಇವರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.


