ಕಾಸರಗೋಡು: ಮೇಲ್ಪರಂಬ ಪೋಲೀಸ್ ಠಾಣೆ ವ್ಯಾಪ್ತಿಯ ಪೆರುಂಬಳ ಕೋಳಿಯಡ್ಕದಿಂದ ನಾಪತ್ತೆಯಾಗಿದ್ದ ಗೃಹಿಣಿ ಮತ್ತೊಬ್ಬ ಯುವಕನನ್ನು ವಿವಾಹವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಹಲೀಮ ಸದಿಯ ಎಂಬಾಕೆ ತ್ರಿಶ್ಯೂರ್ ನಿವಾಸಿ ಅಜಯ್ ಎಂಬಾತನನ್ನು ವಿವಾಹವಾಗಿ ಚಿರುತುರುತ್ತಿ ಪೆÇಲೀಸರ ಮುಂದೆ ಹಾಜರಾಗಿರುವುದಾಗಿ ತೃಶೂರು ಪೆÇಲೀಸರು ಮೇಲ್ಪರಂಬ ಪೆÇಲೀಸರಿಗೆ ತಿಳಿಸಿದ್ದಾರೆ.
ಸೋಮವಾರ ರಾತ್ರಿ 11.30ರಿಂದ ಮಂಗಳವಾರ ಬೆಳಗ್ಗೆ 6 ಗಂಟೆ ನಡುವಿನ ಸಮಯದಲ್ಲಿ ಗೃಹಿಣಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಈಕೆ ತಂದೆ ಮೇಲ್ಪರಂಬ ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು. ಹಲೀಮ ವಿದೇಶದಲ್ಲಿದ್ದ ಸಂದರ್ಭ ಅಜಯ್‍ನನ್ನು ಪರಿಚಯ ಹೊಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ತಂದೆ ನೀಡಿದ ದಊರಿನನ್ವಯ ನಾಪತ್ತೆಯಾದ ಮಹಿಳೆ ಪತ್ತೆಗಾಗಿ ಪೆÇಲೀಸರು ಹುಡುಕಾಟ ನಡೆಸುತ್ತಿರುವ ಮಧ್ಯೆ ಗೃಹಿಣಿ ಹಾಗೂ ಅಜಯ್ ಮದುವೆಯಾಗಿ ಪೆÇಲೀಸ್ ಠಾಣೆಯಲ್ಲಿ ಹಾಜರಾದ ವಿಷಯ ಮೇಲ್ಪರಂಬ ಠಾಣೆ ಪೋಲೀಸರ ಮೂಲಕ ಮನೆಯವರಿಗೆ ಲಭಿಸಿದೆ.


