HEALTH TIPS

ಯೆಮನ್‌ನ ಮತ್ತೊಂದು ಪಟ್ಟಣ 'ಹೂಥಿ' ವಶಕ್ಕೆ

ಅದನ್ : ಇ‌ರಾನ್ ಬೆಂಬಲಿತ ಹೂಥಿ ಬಂಡುಕೋರರು ನೈರುತ್ಯ ಯೆಮನ್‌ನಲ್ಲಿ ಮತ್ತಷ್ಟು ಪ್ರದೇಶಗಳನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.


ಸೌದಿ ಬೆಂಬಲಿತ ಸರ್ಕಾರಿ ಪಡೆಗಳಿಗೆ ಅಘಾತ ನೀಡುವ ಮೂಲಕ ಪ್ರಮುಖ ಪಟ್ಟಣ ತರ್ಬಾವನ್ನು ತಮ್ಮ ಸುರ್ಪದಿಗೆ ತೆಗೆದುಕೊಂಡಿರುವ ಅವರು, ಸೋಮವಾರ ಆ ವಲಯದ ಆಯಕಟ್ಟಿನ ಪ್ರಾಂತ್ಯದ ರಾಜಧಾನಿ ತೈಜ್‌ನತ್ತ ಮುನ್ನುಗ್ಗಿದ್ದಾರೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸರ್ಕಾರವು ಹೂಥಿಗಳ ವಿರುದ್ಧ ಭಾನುವಾರ ಸೇನಾ ಕಾರ್ಯಾಚರಣೆ ಘೋಷಿಸಿತ್ತು. ಅದಕ್ಕೂ ಸ್ವಲ್ಪ ಮೊದಲು ತರ್ಬಾ ಪಟ್ಟಣ ನಾಶಗೊಂಡಿದೆ.

ಯೆಮನ್ ಸರ್ಕಾರದ ಮಧ್ಯಂತರ ನೆಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂದರು ನಗರ ಅದನ್‌ನೊಂದಿಗೆ ಪ್ರಾಂತ್ಯದ ರಾಜಧಾನಿ ತೈಜ್ ಅನ್ನು ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ತರ್ಬಾ ಪಟ್ಟಣವಿದೆ. ಈ ಪಟ್ಟಣವು ಹೂಥಿಗಳ ವಿರುದ್ಧ ತೈಜ್ ಅನ್ನು ರಕ್ಷಿಸುವ ಸರ್ಕಾರಿ ಪಡೆಗಳ ಪ್ರಮುಖ ನೆಲೆಯಾಗಿತ್ತು.

ಇದಕ್ಕೂ ಮುನ್ನ, ಹೂಥಿಗಳು ತೈಜ್‌ನ ಹೊರವಲಯದಲ್ಲಿರುವ ಹಲವಾರು ಹಳ್ಳಿಗಳು ಮತ್ತು ಪ್ರದೇಶಗಳನ್ನು ವಶಕ್ಕೆ ಪಡೆದಿದ್ದರು.

ಹೂಥಿ ಮತ್ತು ಸೌದಿ ಅರೇಬಿಯಾದ ನಡುವಿನ ಈ ಸಂಘರ್ಷವು, ಕಳೆದ ನಾಲ್ಕು ವರ್ಷಗಳ ಕದನ ವಿರಾಮದಲ್ಲಿದ್ದ ಯೆಮನ್‌ನ ಅಂತರ್ಯುದ್ಧ ಮತ್ತೆ ಆರಂಭವಾಗುವಂತೆ ಮಾಡಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries