HEALTH TIPS

ತಿರುವನಂತಪುರ: ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ಶ್ರೀಲೇಖಾ ರಾಜೀನಾಮೆ

ತಿರುವನಂತಪುರ (PTI): ಇಲ್ಲಿನ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ನಿವೃತ್ತ ಡಿಜಿಪಿ ಆರ್. ಶ್ರೀಲೇಖಾ ಅವರು ರಾಜೀನಾಮೆ ನೀಡಿದ್ದಾರೆ.


ಸೆ. 30ರಂದು ಶ್ರೀಲೇಖಾ ಅವರು ರಾಜೀನಾಮೆ ಪತ್ರ ಸಲ್ಲಿಸಿರುವುದನ್ನು ಮೇಯರ್‌ ವಿ.ವಿ.ರಾಜೇಶ್‌ ಶನಿವಾರ ಖಚಿತಪಡಿಸಿದ್ದಾರೆ.

ತಮ್ಮ ವಾರ್ಡ್‌ನ ನಿವಾಸಿಗಳ ವಾಟ್ಸ್‌ಆಯಪ್‌ ಗ್ರೂಪ್‌ನಲ್ಲಿ ಶ್ರೀಲೇಖಾ ರಾಜೀನಾಮೆಯ ಸಂದೇಶ ಪೋಸ್ಟ್‌ ಮಾಡಿದ್ದರು. 

ಆ ಮೂಲಕ ಈ ವಿಚಾರ ಬೆಳಕಿಗೆ ಬಂದಿತ್ತು. ಆಡಳಿತಾರೂಢ ಬಿಜೆಪಿಗೂ ಇದು ಕಗ್ಗಂಟಾಗಿದೆ.

'ವೈಯಕ್ತಿಕ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಪಾಲಿಕೆಯ ಕಾರ್ಯದರ್ಶಿಗೆ ಇನ್ನೂ ರಾಜೀನಾಮೆ ಪತ್ರ ರವಾನೆ ಮಾಡಿಲ್ಲ. ಮನವೊಲಿಕೆ ಪ್ರಯತ್ನ ನಡೆದಿದೆ. ಶ್ರೀಲೇಖಾ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪಕ್ಷ ಸ್ಥಾನಮಾನ ನೀಡಲಿದೆ' ಎಂದು ಮೇಯರ್‌ ರಾಜೇಶ್ ತಿಳಿಸಿದ್ದಾರೆ.

ಮೇಯರ್‌ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ ಶ್ರೀಲೇಖಾ ರಾಜೀನಾಮೆ ನೀಡಿದ್ದಾರೆ ಎಂಬ ಚರ್ಚೆ ನಡೆದಿದೆ.

2025ರಲ್ಲಿ ಚುನಾವಣೆ ನಡೆದಾಗ ಶ್ರೀಲೇಖಾ ಮೇಯರ್‌ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. 51 ಸ್ಥಾನ ಗೆದ್ದಿದ್ದ ಬಿಜೆಪಿ, ಕೇರಳಂ ಇತಿಹಾಸದಲ್ಲಿ ಮೊದಲ ಬಾರಿ ಪಾಲಿಕೆ ಅಧಿಕಾರ ಹಿಡಿದಿತ್ತು.

ಶ್ರೀಲೇಖಾ ಅವರ ರಾಜೀನಾಮೆ ಅಂಗೀಕಾರಗೊಂಡರೆ 101 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ ಸಂಖ್ಯಾಬಲ 49ಕ್ಕೆ ಕುಸಿಯಲಿದೆ. ಸದ್ಯ ಒಬ್ಬ ಪಕ್ಷೇತರ ಸದಸ್ಯ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯ ಮತ್ತೊಬ್ಬ ಸದಸ್ಯ ಆರ್‌.ಸುಗತನ್‌ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ.

- ಎಸ್‌.ಪಿ ದೀಪಕ್‌, ಎಲ್‌ಡಿಎಫ್‌ ನಾಯಕ ಕಳೆದ ಒಂಬತ್ತು ತಿಂಗಳಲ್ಲಿ ಮೇಯರ್‌ ಕಾರ್ಯವೈಖರಿ ಸರಿಯಿಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು ಇಂತಹ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರಿಯಲು ಬಯಸುವುದಿಲ್ಲ- ಕೆ.ಎಸ್.ಶಬರಿನಂದನ್‌, ಯುಡಿಎಫ್‌ ನಾಯಕಪಾಲಿಕೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ನಾವು ಯಾವುದೇ ಕಾರಣಕ್ಕೂ ಎಲ್‌ಡಿಎಫ್‌ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries