ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರ ಚುಕ್ಕಿನಡ್ಕದಲ್ಲಿ ಜರಗಲಿರುವ 32ನೇ ವಾರ್ಷಿಕೋತ್ಸವ ಹಾಗೂ ತಿರುವಿಳಕ್ಕ್ ಮಹೋತ್ಸವದ ಸಮಾಲೋಚನಾ ಸಭೆ ಮಂದಿರದಲ್ಲಿ ಜರಗಿತು. ಮಂದಿರದ ಪ್ರಧಾನ ಗುರುಸ್ವಾಮಿ ಕುಂಞÂಕಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂದಿರ ಸಮಿತಿ ಅಧ್ಯಕ್ಷ ಮಂಜುನಾಥ ಡಿ ಮಾನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿರುವಿಳಕ್ಕ್ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಸಿ.ಎಚ್, ಕಾರ್ಯದರ್ಶಿ ಸತ್ಯನಾರಾಯಣ ಸಿ.ಎಚ್, ವಿವಿಧ ಮಂದಿರದ ಗುರುಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಜಯಲಕ್ಷ್ಮಿ ನಾರಾಯಣ ಪ್ರಾರ್ಥನೆ ಹಾಡಿದರು. ಪ್ರಜುನ್ ಚುಕ್ಕಿನಡ್ಕ ಸ್ವಾಗತಿಸಿ, ನಿರೂಪಿಸಿದರು. ಹರಿಪ್ರಸಾದ್ ಸಿ.ಎಚ್. ವಂದಿಸಿದರು.

.jpg)
