HEALTH TIPS

ಕಾಸರಗೋಡು ಐಸಿಎಆರ್-ಸಿ.ಪಿ.ಸಿ.ಆರ್.ಐ.ಗೆ ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

ಕಾಸರಗೋಡು: ತೆಂಗು ಅಭಿವೃದ್ಧಿ ಮಂಡಳಿಯ (ಸಿಡಿಬಿ) ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದೀಪಾ ಡಿ. ನಾಯರ್ ಕಾಸರಗೋಡಿನ ICMR-ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಗೆ (ಐಸಿಎಆರ್-ಸಿಪಿಸಿಆರ್‍ಐ) ಭೇಟಿ ನೀಡಿದರು. ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಿ. ಹೆಬ್ಬಾರ್ ಹಾಗೂ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು ಮತ್ತು ತೆಂಗು ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿನ ಪ್ರಮುಖ ಆದ್ಯತೆಗಳ ಕುರಿತು ಚರ್ಚಿಸಿದರು. 


ಭೇಟಿ ಸಂದರ್ಭ ವಿಜ್ಞಾನಿಗಳು ಬೆಳವಣಿಗೆಯ ನಿಯತಾಂಕಗಳು, ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ದಾಲ್ಚಿನ್ನಿ ಬೆಳೆಯುವ ವಿಧಾನ - ಪೆಂಟಗನ್ ವಿಧಾನ 

, ಕಲ್ಪ ಸ್ಮಾರ್ಟ್ ಪೆÇೀಲ್ ಮತ್ತು ಐಸಿಎಆರ್-ಸಿಪಿಸಿಆರ್‍ಐ ನಲ್ಲಿ ಅಭಿವೃದ್ಧಿಪಡಿಸಲಾದ ನಿಖರ ಕೃಷಿ ವ್ಯವಸ್ಥೆ,  ಸಂಸ್ಥೆಯಿಂದ ನಡೆಯುತ್ತಿರುವ ಸಂಶೋಧನೆ ಮತ್ತು ತಾಂತ್ರಿಕ ನಾವೀನ್ಯತೆಗಳನ್ನು ವೀಕ್ಷಿಸಿದರು. 

ಕಾರ್ಬನ್-ಕ್ರೆಡಿಟ್ ಉಪಕ್ರಮಗಳು, ಹೊರಸೂಸುವಿಕೆ ಕಡಿತ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು (ವಿಶೇಷವಾಗಿ ಎಲ್‍ನಿನೋ) ಎದುರಿಸುವುದು, ತಂತ್ರಜ್ಞಾನದ ವಾಣಿಜ್ಯೀಕರಣ ಮತ್ತು ಮೌಲ್ಯವರ್ಧಿತ ಉತ್ಪನ್ನ ಮುಂತಾದ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳ ಕುರಿತು ಚರ್ಚೆ ನಡೆಯಿತು. ಸುಸ್ಥಿರ ತೆಂಗು ಅಭಿವೃದ್ಧಿ ಮತ್ತು ರೈತರ ಜೀವನೋಪಾಯದ ಸುಧಾರಣೆಗಾಗಿ ಸಿಡಿಬಿ ಮತ್ತು ಐಸಿಎಆರ್-ಸಿಪಿಸಿಆರ್‍ಐ ನಡುವಿನ ಸಾಂಸ್ಥಿಕ ಸಹಯೋಗವನ್ನು ಬಲಪಡಿಸುವ ಬದ್ಧತೆಯೊಂದಿಗೆ ಭೇಟಿ ಆಯೋಜಿಸಲಾಗಿತ್ತು. ತಮಿಳುನಾಡು ಮತ್ತು ಪುದುಚೇರಿಯ ರೈತರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.  ದೀಪಾ ಡಿ. ನಾಯರ್ ಅವರು 'ಪಾಮ್ ಟಾಪ್ ಕೋಕೋಸ್ಯಾಪ್ ಕಾನ್ಸೆಂಟ್ರೇಟರ್' (Palm Top Cocosap Concentrator) ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries