ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾಜೆ ತಲೆಬೈಲು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು, ಮೂರು ಮಂಧಿಯನ್ನು ಬಂಧಿಸಿದ್ದಾರೆ.
ಬದಿಯಡ್ಕ ಸನಿಹದ ಮಾಡತ್ತಡ್ಕ ನಿವಾಸಿ ಪ್ರಮೋದ್ (43), ವಿದ್ಯಾಗಿರಿ ಕಡಾರಿನ ಜಗದೀಶ ಶೆಟ್ಟಿ (58) ನಾರಂಪಾಡಿ ನೆಲ್ಲಿಯಡ್ಕದ ಸುಕೇಶ್ (28) ಬಂಧಿತರು.
ಸ್ಥಳದಿಂದ 6ಅಂಕದ ಕೋಳಿಗಳು ಮತ್ತು ಜೂಜಿಗೆ ಬಳಸಿದ್ದರೆನ್ನಲಾದ 3,250 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಉಳಿದವರು ಓಡಿ ಪರಾರಿಯಾಗಿದ್ದಾರೆ.
ಬದಿಯಡ್ಕ ಠಾಣೆ ಪ್ರಿನ್ಸಿಪಲ್ ಎಸ್‍ಐ ಸುನಿಲ್ ಕುಮಾರ್ ನೇತೃತ್ವದ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರನ್ನು ನಂತರ ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

