ಕಾಸರಗೋಡು: ಹೊಸದುರ್ಗದಲ್ಲಿ ಮನೆ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ವೇಳೆ ಉಂಟಾದ ಅನಾರೋಗ್ಯದಿಂದ ಅಂಬಲತ್ತರ ಪಾರಪ್ಪಳ್ಳಿ ನಿವಾಸಿ, ದಿ| ಅಬ್ದುಲ್ ರಹಿಮಾನ್-ನಫೀಸ ದಂಪತಿ ಪುತ್ರ ಸಜಾರಿಯ (45) ಮೃತಪಟ್ಟಿದ್ದಾರೆ. ಇವರು ಟಿಪ್ಪರ್ ಲಾರಿ ಚಾಲಕನಾಗಿ ದುಡಿಯುತ್ತಿದ್ದರು. ಇವರು ತನ್ನ ಸ್ವಂತ ಮನೆ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಮಡಿದ್ದ ವೇಳೆ ಅಸೌಖ್ಯ ಕಾಣಿಸಿಕೊಂಡಿದ್ದು, ತಕ್ಷಣ ಇವರನ್ನು ಕಾಞಂಗಾಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

