ಕೊಚ್ಚಿ: ನವರಾತ್ರಿ ಹಬ್ಬದ ಸಂಭ್ರಮದ ಪ್ರಯುಕ್ತ ಕೊಚ್ಚಿನ್ ಕನ್ನಡ ಸಂಘದ ಆಶ್ರಯದಲ್ಲಿ ಅ. 11 ರಂದು ಪ್ರಪ್ರಥಮ ಬಾರಿಗೆ ಆಯೋಜಿಸಲಾದ ಯಕ್ಷಗಾನ ಪ್ರದರ್ಶನವು ಕಲಾಪ್ರೇಮಿಗಳ ಅಪಾರ ಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಖ್ಯಾತ ತಂಡ 'ಯಕ್ಷಕದಂಬ ಅಲೆತ್ತೂರು' ಕಲಾವಿದರು 'ಏಕಾದಶಿ ಮಹಾತ್ಮೆ' ಎಂಬ ಪೌರಾಣಿಕ ಪ್ರಸಂಗವನ್ನು ರಂಗದ ಮೇಲೆ ಅದ್ಭುತವಾಗಿ ಅನಾವರಣಗೊಳಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀವತ್ಸ ಸೋಮಯಾಜಿ, ಮದ್ದಳೆಯಲ್ಲಿ ಶಿಕಿನ್ ಶರ್ಮಾ ಹಾಗೂ ಚೆಂಡೆಯಲ್ಲಿ ವರುಣ್ ಹೆಬ್ಬಾರ್ ಅವರ ನಾದ ಸಂಯೋಜನೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಮುಮ್ಮೇಳದಲ್ಲಿ ದೇವೇಂದ್ರನಾಗಿ ವಿಘ್ನೇಶ್ ಕಾರಂತ ಕೂಡ್ಲು, ನಾಡಿಜಂಘನಾಗಿ ಲೋಹಿತ್ ಕುಮಾರ್ ವಾಮದಪದವು, ಗರುಡನಾಗಿ ಮಧುರಾಜ್ ವಾಮದಪದವು, ಮುರಾಸುರನಾಗಿ ಸಚಿನ್ ಹೊಳ್ಳ ಕಳ್ಳಿಮಾರು, ಮಹಾವಿಷ್ಣುವಾಗಿ ನರಸಿಂಹ ಮಯ್ಯ ಅಲೆತ್ತೂರು ಹಾಗೂ ದೇವಿಯಾಗಿ ಡಾ. ಪರಿಣಿತ ರವಿ ಅತ್ಯುತ್ತಮ ಅಭಿನಯ ನೀಡಿ ಗಮನಸೆಳೆದರು.
ನರಸಿಂಹ ಮಯ್ಯ ಅಲೆತ್ತೂರು ಅವರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಈ ಯಕ್ಷಗಾನವನ್ನು ಅವಿನಾಶ್ ಕಾರಂತ ಮತ್ತು ರಾಮಪ್ರಸಾದ್ ಮಯ್ಯ ಕೂಡ್ಲು ಅಚ್ಚುಕಟ್ಟಾಗಿ ಸಂಘಟಿಸಿದ್ದರು. ಡಾ. ಪರಿಣಿತ ರವಿ ಅವರ ಸಂಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕೊಚ್ಚಿಯ ಕನ್ನಡಿಗರ ಸಾಂಸ್ಕøತಿಕ ಕಣ್ಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.

.jpg)
.jpg)
