ತಿರುವನಂತಪುರಂ: ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚಲು ರಾಜ್ಯದ ಕಾಲೇಜು ವಸತಿ ನಿಲಯಗಳಲ್ಲಿ ತಪಾಸಣೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
2023 ರಲ್ಲಿ ಅಕ್ರಮ ವಸತಿ ನಿಲಯಗಳನ್ನು ತೆರವುಗೊಳಿಸಲು ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಕಾಲೇಜು ಶಿಕ್ಷಣ ನಿರ್ದೇಶನಾಲಯ ಪ್ರಾಂಶುಪಾಲರು ಮತ್ತು ಹಾಸ್ಟೆಲ್ ವಾರ್ಡನ್ ಗಳಿಗೆ ನಿರ್ದೇಶನ ನೀಡಿತ್ತು.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ರಜೆ ಇರುವಾಗ ಹಾಸ್ಟೆಲ್ ಗಳು ಮುಚ್ಚಬೇಕು. ರಜಾದಿನಗಳಲ್ಲಿ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಅವರಿಗೆ ಹಾಸ್ಟೆಲ್ ನಲ್ಲಿ ಉಳಿಯಲು ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಆದರೆ ಅಂದಿನ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿರಲಿಲ್ಲ.
ಇದೀಗ ಹಾಸ್ಟೆಲ್ ಗಳಲ್ಲಿ ವ್ಯರ್ಥವಾಗಿ ಹೊರಗಿನವರು ಉಳಕೊಂಡು ವಿದ್ಯಾರ್ಥಿಗಳನ್ನು ವಿದ್ವಂಸಕತೆಗೆ ಪ್ರೇರೇಪಿಸುವುದು ಸಹಿತ ಸಮಾಜ ವಿರೋಧಿ ಕೃತ್ಯಗಳಿಗೆ ಬಳಸುತ್ತಿರುವ ಬಗೆಗಿನ ಖಚಿತ ಮಾಹಿತಿಯ ಮೇರೆಗೆ ತುರ್ತು ಕ್ರಮಕ್ಕೆ ಮುಂದಾಗಲಾಗಿದೆ.


