HEALTH TIPS

'ನೋಡಿ ನಿಮ್ಮ ಸೋದರಿಗೇ ನಿಮ್ಮ ಮೇಲೆ ನಂಬಿಕೆ ಇಲ್ಲ, ಇನ್ನು ದೇಶದ ಜನ...': ರಾಹುಲ್ ಗಾಂಧಿಗೆ ಕುಟುಕಿದ ಬಿಜೆಪಿ; Video

 ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸ್ಟಿಂಗ್ ಎನರ್ಜಿ ಡ್ರಿಂಕ್‌ನ ಬಾಟಲಿ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ನಿನ್ನೆ ಸಾಯಂಕಾಲ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ INDIA ಬ್ಲಾಕ್ ನಡೆಸಿದ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ. 


ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಬಿಜೆಪಿ, “ ರಾಹುಲ್ ಗಾಂಧಿ ಖ್ಯಾತಿಗೆ ಎಷ್ಟು ಧಕ್ಕೆ ಉಂಟಾಗಿದೆ ಎಂದರೆ ಸಾರ್ವಜನಿಕರನ್ನು ಬಿಡಿ, ಈಗ ಕುಟುಂಬದವರಿಗೂ ನಂಬಿಕೆ ಇಲ್ಲ” ಎಂದು ವ್ಯಂಗ್ಯವಾಡಿದೆ.

ದೆಹಲಿಯ ಕೇಂದ್ರ ಆಕಾಶವಾಣಿ ಭವನ ಸಂಕೀರ್ಣದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಕುಳಿತಿದ್ದ ವೇಳೆ ಈ ವಿಡಿಯೊ ಚಿತ್ರೀಕರಿಸಲಾಗಿದೆ. ಚುನಾವಣಾ ಆಯೋಗದತ್ತ ಮೆರವಣಿಗೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಬಳಿಕ ನಾಯಕರು ಅಲ್ಲಿಯೇ ಕುಳಿತಿದ್ದರು.

ಪ್ರಿಯಾಂಕಾಗೆ ಸ್ಟಿಂಗ್ ನೀಡಿದ ರಾಹುಲ್

ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಹಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಬಳಿಕ, ನಾಯಕರು ಸಮೀಪದ ಕನ್ನಾಟ್ ಪ್ಲೇಸ್‌ನ ಖಾನ್ ಚಾಚಾದಿಂದ ತರಿಸಲಾದ ಸ್ನಾಕ್ಸ್ ಸವಿದರು.

ಬಳಿಕ ರಾಹುಲ್ ಗಾಂಧಿಗೆ ಕೆಂಪು ಬಣ್ಣದ 20 ರೂಪಾಯಿ ಬೆಲೆಯ ಕಾರ್ಬೊನೇಟೆಡ್ ಎನರ್ಜಿ ಡ್ರಿಂಕ್ ‘ಸ್ಟಿಂಗ್’ ಬಾಟಲಿ ನೀಡಲಾಯಿತು. ಅವರು ಅದರಿಂದ ಒಂದು ಗುಟುಕು ಕುಡಿದು ಬಳಿಕ ಬಾಟಲಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಿದರು. ಪ್ರಿಯಾಂಕಾ ಬಾಟಲಿಯನ್ನು ಪರಿಶೀಲಿಸಿ, ಪಾನೀಯವನ್ನು ಮೂಸಿ ನೋಡಿದರು. ಆರಂಭದಲ್ಲಿ ಕುಡಿಯಲು ನಿರಾಕರಿಸಿದರು. ನಂತರ ಸಣ್ಣ ಸಿಪ್ ಕುಡಿದು ಅಣ್ಣನಿಗೆ ಬಾಟಲ್ ಕೊಟ್ಟರು.

ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಪ್ರತಿಕ್ರಿಯೆ

ಎಕ್ಸ್‌ನಲ್ಲಿನ ಬಿಜೆಪಿ ಖಾತೆಯಲ್ಲಿ ವಿಡಿಯೊ ಹಂಚಿಕೊಂಡು, “ನಿಮ್ಮ ಸ್ವಂತ ಸಹೋದರಿಗೇ ನಿಮ್ಮಿಂದ ಸ್ಟಿಂಗ್ ತೆಗೆದುಕೊಳ್ಳಲು ನಂಬಿಕೆ ಇಲ್ಲ ಎಂದಾದರೆ, ದೇಶ ನಿಮ್ಮನ್ನು ಏಕೆ ನಂಬಬೇಕು?” ಎಂದು ವ್ಯಂಗ್ಯವಾಡಿದೆ.

ಇನ್ನೂ ಕೆಲವರು ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡ ಪಾನೀಯದ ಕುರಿತು ಪ್ರತಿಕ್ರಿಯಿಸಿದ್ದಾರೆ. ಸ್ಟಿಂಗ್ ಕುಡಿಯುತ್ತಿರುವುದನ್ನು ಕೆಲವರು ‘ಛಾಪ್ರಿ’ ಎಂಬ ಇಂಟರ್‌ನೆಟ್ ಸ್ಲ್ಯಾಂಗ್ ಬಳಸಿ ಟೀಕಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಲೋಕಸಭೆಯ ವಿರೋಧ ಪಕ್ಷದ ನಾಯಕರು “ಸ್ಟಿಂಗ್ ಕುಡಿಯುವ ಜನರಿಗೆ ಬೆಂಬಲ ತೋರಿಸಿದ್ದಾರೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ರಾಹುಲ್ ಗಾಂಧಿಯವರ ಆಯ್ಕೆಯನ್ನು ಶ್ಲಾಘಿಸಿ, “ರಾಹುಲ್ ಕಾರ್ಮಿಕ ವರ್ಗದ ಜನರ ಪಾನೀಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ಬರೆದಿದ್ದಾರೆ.

ಪೆಪ್ಸಿಕೋ ಒಡೆತನದ ಸ್ಟಿಂಗ್ ಕೆಂಪು ಬಣ್ಣದ ಕಾರ್ಬೊನೇಟೆಡ್ ಎನರ್ಜಿ ಡ್ರಿಂಕ್ ಆಗಿದ್ದು, ಇದರಲ್ಲಿ ಕೆಫೀನ್ ಮತ್ತು ಟೌರಿನ್ ಅಂಶಗಳಿವೆ. ಸಾಮಾನ್ಯವಾಗಿ ಕೆಂಪು ಬಾಟಲಿಯಲ್ಲಿ ಲಭ್ಯವಿರುವ ಈ ಪಾನೀಯದ ಬೆಲೆ ಸುಮಾರು 20 ರೂ. ಕ್ಯಾನ್‌ಗೆ ಸುಮಾರು 165 ರೂ ಬೆಲೆಯಿರುವ ರೆಡ್ ಬುಲ್‌ನಂತಹ ಪ್ರೀಮಿಯಂ ಎನರ್ಜಿ ಡ್ರಿಂಕ್‌ಗಳಿಗೆ ಹೋಲಿಸಿದರೆ ಸ್ಟಿಂಗ್ ಸಾಕಷ್ಟು ಅಗ್ಗವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries