HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಇನ್ನೂ ಜೀವಂತ : ಎಂ.ವಿ.ಮಹಾಲಿಂಗೇಶ್ವರ ಭಟ್ ಕಾಸರಗೋಡು: ಅನ್ಯಾಯವಾಗಿ ಕೇರಳದಲ್ಲಿ ಸೇರ್ಪಡೆಯ ಬಳಿಕ ಪ್ರಭಾವಿ ಭಾಷಿಗರ ದಬ್ಬಾಳಿಕೆ, ಅಧಿಕಾರಿಗಳ ಕಿರುಕುಳ ನಿರಂತರವಾಗಿದ್ದರೂ ಕಾಸರಗೋಡಿನಲ್ಲಿ ಕನರ್ಾಟಕಕ್ಕಿಂತಲೂ ಹೆಚ್ಚು ಕನ್ನಡ ಭಾಷೆ, ಸಂಸ್ಕೃತಿ ಜೀವಂತವಾಗಿದೆ ಎಂದು ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಅವರು ಹೇಳಿದರು. ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಸಂಸ್ಕೃತಿ ಸಂವರ್ಧನೆಯ ಮೂಲಕ ಸ್ವಸ್ಥ ಮತ್ತು ಸ್ವಚ್ಛ ಸಮಾಜ ನಿಮರ್ಾಣ ಸಾಧ್ಯ ಎಂಬ ಉದ್ದೇಶದಿಂದ ಭಾನುವಾರ ಸಂಜೆ ಆಯೋಜಿಸಿದ ತಿಂಗಳ ಹಬ್ಬ ಸಪ್ತಮದ ಅಂಗವಾಗಿ ಕನ್ನಡ ಸಾಂಸ್ಕೃತಿಕ ಉತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಹಯೋಗದೊಂದಿಗೆ ಕನ್ನಡ ಭಾಷಾ ಅಲ್ಪಸಂಖ್ಯಾತರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ `ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರು' ಎಂಬ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು. ಕಾಸರಗೋಡಿನಲ್ಲಿ ಕನ್ನಡದಲ್ಲಿ ವ್ಯವಹರಿಸುವವರೆಲ್ಲರೂ ಅಲ್ಪಸಂಖ್ಯಾತರೆಂದು ಪರಿಗಣಿಸಲಾಗಿದೆ. ಹೀಗಿದ್ದರೂ ಸರಕಾರ ಸಂವಿಧಾನಬದ್ಧವಾಗಿ ನೀಡಿರುವ ಸ್ಥಾನಮಾನ, ಸವಲತ್ತು ಉಳಿಸಿಕೊಳ್ಳಬೇಕಾದರೆ ಕನ್ನಡವನ್ನು ಇನ್ನಷ್ಟು ಹೆಚ್ಚೆಚ್ಚು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸರಕಾರಿ ಇಲಾಖೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕನ್ನಡಿಗರಿರಬೇಕೆಂದು ಸರಕಾರದ ಆದೇಶವಿದ್ದರೂ, ಕಾಸರಗೋಡಿನಲ್ಲಿ ಆ ಪ್ರಮಾಣದಲ್ಲಿ ಸರಕಾರಿ ಕಚೇರಿಗಳಲ್ಲಿ ಕನ್ನಡಿಗರಿಲ್ಲ. ಈ ಸವಲತ್ತು ಪೂರ್ಣ ಪ್ರಮಾಣದಲ್ಲಿ ಗಿಟ್ಟಿಸಿಕೊಳ್ಳಲು ಭಾಷಾ ಅಲ್ಪಸಂಖ್ಯಾತರಾದ ನಾವೆಲ್ಲರೂ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಾಧ್ಯವಾಗಬಹುದು. ಕಾಸರಗೋಡಿನಲ್ಲಿ ನಮ್ಮದೇ ಆದ ಸಂಸ್ಕೃತಿ ಇದೆ. ಅದನ್ನು ಉಳಿಸಿಕೊಳ್ಳಬೇಕಿದ್ದರೆ ಭಾಷಾ ಅಲ್ಪಸಂಖ್ಯಾಕರು ಉಳಿಯಬೇಕು ಎಂದರು. ಕಾಸರಗೋಡಿನಲ್ಲಿ ಕನ್ನಡ ಅಳಿವಿನ ಅಂಚಿನಲ್ಲಿಲ್ಲ. ಬದಲಾಗಿ ಉಳಿಯುವ ಅಂಚಿನಲ್ಲಿದೆ. 2016 ನ.1 ರಂದು ತಿರುವನಂತಪುರದಲ್ಲಿ ಆಯೋಜಿಸಿದ ಸೆಕ್ರೆಟರಿಯೇಟ್ ಮಾಚರ್್ ಮತ್ತು ಕಳೆದ ಮೇ 23 ರಂದು 10 ಸಾವಿರಕ್ಕೂ ಅಧಿಕ ಕನ್ನಡಿಗರು ಜಿಲ್ಲಾಧಿಕಾರಿ ಕಚೇರಿಯನ್ನು ದಿಗ್ಬಂಧಿಸಿ ಐತಿಹಾಸಿಕ ಕನ್ನಡ ಕಹಳೆ ತಿರುವನಂತಪುರಕ್ಕೆ ಕೇಳಿಸುವಂತಾದುದು ಇದಕ್ಕೆ ಸ್ಪಷ್ಟ ಉದಾಹರಣೆ. ಕನ್ನಡವನ್ನು ಉಳಿಸುವ ಜೊತೆಗೆ ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ಸರ್ವ ಕನ್ನಡಿಗರು ಒಂದೇ ಛತ್ರದಡಿ ಸೇರಬೇಕು ಎಂದರು. ಕಾಸರಗೋಡಿನಲ್ಲಿ ಕನ್ನಡಿಗರ ಶಕ್ತಿ ಕನ್ನಡಿಗರಿಗೆ ಗೊತ್ತಿಲ್ಲ. ಇಂತಹ ಪರಿಸ್ಥಿತಿಯನ್ನು ಬದಲಾಯಿಸಬೇಕಿದ್ದಲ್ಲಿ ಸಮರ್ಥ ಕನ್ನಡದ ನಾಯಕ ಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರು ಕನ್ನಡ ಧ್ವಜವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಸರಗೋಡಿನ ಕನ್ನಡಿಗರ ಸೇವೆ, ತ್ಯಾಗ ಮಹೋನ್ನತವಾದುದು. ಈ ಬಗ್ಗೆ ಕನರ್ಾಟಕದ ಕನ್ನಡಿಗರೇ ಅಚ್ಚರಿ ಪಡುತ್ತಾರೆ. ನಮ್ಮ ಹಿರಿಯರು ನಡೆಸಿದ ಕನ್ನಡ ಪರ ಹೋರಾಟ ನೆನಪಿಸಿದಾಗ ರೋಮಾಂಚನವಾಗುತ್ತದೆ ಎಂದ ಅವರು ಇಲ್ಲಿ ಇನ್ನೂ ಕನ್ನಡದ ಧೀಶಕ್ತಿ ಉಳಿದು ಕೊಂಡಿದೆ ಎಂಬುದಕ್ಕೆ ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಕನ್ನಡ ಪರ ಚಟುವಟಿಕೆಗಳೇ ಸಾಕ್ಷಿ ಎಂದರು. ಅಭ್ಯಾಗತರಾಗಿ ಪಾಲ್ಗೊಂಡ ನ್ಯಾಯವಾದಿ ಎ.ಸದಾನಂದ ರೈ ಅವರು ಮಾತನಾಡಿ ಕಾಸರಗೋಡು ಸರಕಾರಿ ಕಾಲೇಜಿನ ಗೋಡೆಗಳಲ್ಲಿ ಕಿಡಿಗೇಡಿಗಳು ಬರೆದ ಕನ್ನಡ ವಿರೋಧಿ ಬರಹಗಳನ್ನು ಒರೆಸಿ ತೆಗೆಯಬಹುದು. ಆದರೆ ಕನ್ನಡದ ಭಾವನೆಗಳನ್ನು ಅಳಿಸಿ ಹಾಕಲು ಇಂತಹ ಕಿಡಿಗೇಡಿಗಳಿಗೆ ಸಾಧ್ಯವಿಲ್ಲ. ಕೇರಳ ಸರಕಾರ ಇಲ್ಲಿ ಅಧಿಪತ್ಯ ಹೇರಿದರೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಅಳಿಸಲು ಎಂದೆಂದಿಗೂ ಸಾಧ್ಯವಿಲ್ಲ ಎಂದರು. ಛಲದಿಂದ ಹೋರಾಡಿದರೇ ಗೆಲುವು ನಮ್ಮದೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಅವರು ಮಾತನಾಡಿ ಕಾಸರಗೋಡಿನಲ್ಲಿ ನಿರಂತರ ಚಟುವಟಿಕೆಯಿಂದ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು. ಯುವ ಉದ್ಯಮಿ ಶ್ರೀನಿವಾಸ ಭಟ್ ಕಾಸರಗೋಡು ಅವರು ಮಾತನಾಡಿ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ನೀಡಲಾದ ಎಲ್ಲಾ ಸವಲತ್ತುಗಳನ್ನು ಪಡೆಯಲು ಕನ್ನಡಿಗರು ಜಾಗೃತರಾಗಬೇಕಾಗಿದೆ. ಕನರ್ಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಕಾಸರಗೋಡಿನ ಕನ್ನಡಿಗರಿಗೆ ಸರಕಾರಿ ಕಚೇರಿಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಕನ್ನಡವನ್ನು ಉಳಿಸಲು ಸಾಧ್ಯವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕನರ್ಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀ`ರ ಬಳ್ಳಕ್ಕುರಾಯ ಅವರು ಮಾತನಾಡಿ ಕನ್ನಡ ಜಾಗೃತಿ ಸಮಿತಿ ಕಾಸರಗೋಡಿನಾದ್ಯಂತ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ಮೂಲಕ ಕನ್ನಡ ಜಾಗೃತಿಯನ್ನು ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟ ಅವರು ಸರಕಾರದೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಮೂಲಕ ಕನ್ನಡಿಗರಿಗೆ ಹೆಚ್ಚಿನ ಸವಲತ್ತು ಲಭಿಸಲು ಸಾಧ್ಯವಾಗಬಹುದು ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಕ್ ಅವರನ್ನು ಸಮ್ಮಾನಿಸಲಾಯಿತು. ಖ್ಯಾತ ಚಿತ್ರ ಕಲಾವಿದ ಲಕ್ಷ್ಮೀಶ ಆಚಾರ್ಯ ಕಾಸರಗೋಡು ಅವರನ್ನು `ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಉತ್ಸವದಂಗವಾಗಿ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕೂಡ್ಲು, ಸ್ವರ್ಣಲತ, ಪ್ರವೀಣ್ ನಲ್ಕ, ದಿವಾಕರ ಅಶೋಕನಗರ, ಜಯಾನಂದ ಕುಮಾರ್ ಹೊಸದುರ್ಗ, ಯಜ್ಞೇಶ್ ಆಚಾರ್ಯ ಬಾಯಾರ್ ಅವರಿಂದ ಕನ್ನಡ ನಾಡಗೀತೆಗಳ ಗಾಯನ, ಭವ್ಯಶ್ರೀ ಬಾಡೂರು ಶಿಷ್ಯವೃಂದದವರಿಂದ ಕನ್ನಡ ನಾಡಗೀತೆಗಳ ನೃತ್ಯ ನಡೆಯಿತು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ಸ್ವಾಗತಿಸಿ, ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿದರು. ಲತಾ ಪ್ರಕಾಶ್, ಕಾವ್ಯ ಕುಶಲ, ಗಣೇಶ್ ಆಚಾರ್ಯ ಕಯ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries