ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 13, 2017
ಭಾರತವನ್ನು ರೂಪಾಂತರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ: ಅಷಿಯಾನ್ ಫೋರಂನಲ್ಲಿ ಮೋದಿ
ಮನಿಲಾ: ಭಾರತವನ್ನು ರೂಪಾಂತರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಅಷಿಯಾನ್ ಬ್ಯುಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಸಕರ್ಾರದ ಆಥರ್ಿಕ ಸುಧಾರಣಾ ಕ್ರಮಗಳನ್ನು ಪ್ರದಶರ್ಿಸಿದ್ದು ಭಾರತದಲ್ಲಿ ತಮ್ಮ ಹೂಡಿಕೆಗಳನ್ನು ಹೆಚ್ಚಿಸಲು ಅಷಿಯಾನ್ ದೇಶಗಳನ್ನು ಆಹ್ವಾನಿಸಿದರು. ಮತ್ತು ದೇಶವನ್ನು ಪರಿವತರ್ಿಸುವ ಕಾರ್ಯವು ಅತಿದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದರು.
ಆಕ್ಟ್ ಈಸ್ಟ್ ಪಾಲಿಸಿಯಿಂದಾಗಿ ಭಾರತದಲ್ಲಿ ಬಂಡವಾಳ ಹೂಡಲು ಸುಲಭವಾಗಿದೆ. ಇನ್ನು ಭಾರತೀಯ ಆಥರ್ಿಕತೆಯ ಹೆಚ್ಚಿನ ಕ್ಷೇತ್ರಗಳು ವಿದೇಶಿ ಹೂಡಿಕೆಗೆ ತೆರದಿವೆ. ಜತೆಗೆ ನಾವು ಸುಲಭ ಮತ್ತು ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತ ನೀಡುವುದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದರು.
ತಮ್ಮ ಸಕರ್ಾರ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಾಡಲು ಮತ್ತು ಯುವ ಉದ್ಯೋಗ ಸೃಷ್ಠಿಕರ್ತರನ್ನು ರಚಿಸಲು ಪ್ರಯತ್ನಿಸುತ್ತಿದೆ. ಕನಿಷ್ಠ ಸಕರ್ಾರ, ಗರಿಷ್ಠ ಆಡಳಿತದ ಮೇಲೆ ನಮ್ಮ ನಂಬಿಕೆ ಇಟ್ಟು ಕಳೆದ ಮೂರು ವರ್ಷಗಳಲ್ಲಿ ಸುಮಾರು 1,200 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಸಂಸ್ಥೆಗಳನ್ನು ಪ್ರಾರಂಭಿಸಲು ಮತ್ತು ಇತರ ಅನುಮತಿಗಳಿಗಾಗಿ ನಾವು ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದಲ್ಲಿ ಡಿಜಿಟಲ್ ವಹಿವಾಟುಗಳು ಗಣನೀಯವಾಗಿ ಹೆಚ್ಚಾಗಿದ್ದು ಜನರನ್ನು ತಲುಪಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳೇ ಇಲ್ಲವಾಗಿವೆ. ಈಗಿರುವಾಗ ಜನ್ ಧನ್ ಯೋಜನೆ ಕೋಟ್ಯಾಂತರ ಜನರಿಗೆ ಪ್ರಯೋಜನವಾಗಿದೆ ಎಂದರು.


