ಸೈಂಟ್ ಮೋನಿಕಾ ಶಾಲೆಯ ವಾರ್ಷಿಕೋತ್ಸವ
0
ಡಿಸೆಂಬರ್ 12, 2018
ಕುಂಬಳೆ: ಇಲ್ಲಿನ ಸೈಂಟ್ ಮೋನಿಕಾ ಶಾಲೆಯ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದಂಗವಾಗಿ ಫಾದರ್ ಅಶೋಕ್ ರಾಯಾನ್ ಕ್ರಾಸ್ತಾ ಅವರು ಶಾಲಾ ಧ್ವಜಾರೋಹಣ ನಡೆಸಿ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯ ಫಾದರ್ ಅನಿಲ್ ಪ್ರಕಾಶ್ ಡಿ'ಸಿಲ್ವಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹೇಶ್ ಪುಣಿಯೂರು, ಥೋಮಸ್ ಕ್ರಾಸ್ತಾ, ಪ್ರೆಸಿಲ್ಲ ಡಿ'ಸೋಜಾ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾಸರಗೋಡು ಡಿವೈಎಸ್‍ಪಿ ಟಿ.ಪಿ.ರಂಜಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಿದೆ. ಕಲಿಕೆ ಸುಗಮವಾಗಬೇಕಿದ್ದರೆ ಮನಸ್ಸಿನ ಪ್ರಪುಲ್ಲತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಂಸ್ಕøತಿಕ ಚಟುವಟಿಕೆಗಳು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ ಎಂದು ತಿಳಿಸಿದರು.
ಶಾಲಾ ಶೈಕ್ಷಣಿಕ ವರ್ಷದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನೋರಂಜನಾ ಕಾರ್ಯಕ್ರಮಗಳು ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭವಾಯಿತು. ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


