ಗಮನ ಸೆಳೆದ ಚಿತ್ರ ರಚನಾ ಶಿಬಿರ
0
ಡಿಸೆಂಬರ್ 12, 2018
ಕುಂಬಳೆ: ತ್ರಿಕ್ಕರಿಪುರದ ಇಡೆಯಲಕ್ಕಾಡ್ " ಕಾವ್"ಎಂಬಲ್ಲಿ ಇತ್ತೀಚೆಗೆ ಪ್ರಕೃತಿ ಸಂರಕ್ಷಣಾ ಚಿತ್ರ ರಚನಾ ಶಿಬಿರ ಹಮ್ಮಿಕೊಳ್ಳಲಾಯಿತು.
ರಾಜೇಂದ್ರ ಪುಲ್ಲೂರ್ ಮತ್ತು ವಿನೋದ್ ಅಂಬಲತ್ತರ ಅವರ ನೇತೃತ್ವದಲ್ಲಿ ನವೋದಯ ಆಟ್ರ್ಸ್ ಮತ್ತು ಗ್ರಂಥಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಚಿತ್ರರಚನಾ ಶಿಬಿರ ಯಶಸ್ವಿಯಾಗಿ ನಡೆಯಿತು. ಪ್ರಸಿದ್ಧ ಚಿತ್ರ ಕಲಾವಿದರಾದ ರಾಜೇಂದ್ರ ಪುಲ್ಲೂರ್,ವಿನೋದ್ ಅಂಬಲತ್ತರ, ಡಾ.ಸ್ವಪ್ನ ಮೋಹನ್, ಸತೀಶ್ ಪೆರ್ಲ, ಜಯಪ್ರಕಾಶ್ ಶೆಟ್ಟಿ ಬೇಳ, ರತೀಶ್ ಕಕ್ಕಾಟ್, ವಿಪಿನ್ ಪಲೋತ್ ಮೊದಲಾದ ಕಾಸರಗೋಡು ಜಿಲ್ಲೆಯ ಇಪ್ಪತ್ತರಷ್ಟು ಚಿತ್ರ ಕಲಾವಿದರು ಭಾಗವಹಿಸಿದ್ದರು.
ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಬಿಂಬಿಸುವ, ಪ್ರಾಕೃತಿಕ ಅಸಮತೋಲನವು ಜೀವ ಜಾಲಗಳ ಅಸ್ತಿತ್ವದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನೂರಾರು ಭಾವಗಳನ್ನು ಪರಿಚಯಿಸಿದ ಶಿಬಿರ ಹೊಸ ವರ್ಣ ಲೋಕವನ್ನು ಸೃಷ್ಟಿಸಿತು.


