ಪಠ್ಯದ ಭಾಗವಾಗಿ ಕಲಿಕಾ ತಾಳಮದ್ದಳೆ
0
ಡಿಸೆಂಬರ್ 12, 2018
ಕುಂಬಳೆ: ಕೇರಳ ರಾಜ್ಯದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದ ಪಾಠಭಾಗವಾದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ 'ಶ್ರೀ ಕೃಷ್ಣ ಪರಂಧಾಮ' ಪ್ರಸಂಗದ ಆಯ್ದ ಭಾಗವಾದ "ಕಾಲಪುರುಷನ ಲೀಲೆ" ಯಕ್ಷಗಾನ ಪ್ರಸಂಗದ ಪ್ರಾತ್ಯಕ್ಷಿಕೆ ತಾಳಮದ್ದಳೆ ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಭಾಗವತಿಕೆಯಲ್ಲಿ ರಾಮಪ್ರಸಾದ್ ಮಯ್ಯ ಕೂಡ್ಲು, ಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ, ಅರ್ಥಧಾರಿಗಳಾಗಿ ಗುರುರಾಜ ಹೊಳ್ಳ ಬಾಯಾರು(ಕೃಷ್ಣ), ಎನ್ ರಾಮಚಂದ್ರ ಭಟ್(ಬಲರಾಮ), ಪ್ರಶಾಂತ ಹೊಳ್ಳ ಎನ್(ಬೇಡ), ಶ್ವೇತಾ ಕುಮಾರಿ ಎಂ(ಯಶೋಧೆ), ಈಶ್ವರಿ.ಡಿ(ಅರ್ಜುನ), ಕೃಪಾ(ನಾರದ) ಪಾತ್ರಗಳಲ್ಲಿ ಸಹಕರಿಸಿದರು.

