ನವಜೀವನ ಸಮಿತಿಯಿಂದ ಸೌಹಾರ್ಧ ಕೂಟ
0
ಡಿಸೆಂಬರ್ 12, 2018
ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ವಲಯದ ಮಲ್ಲಾಂಬಿಕಾ ನವಜೀವನ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಮಲ್ಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಪರಿಸರದಲ್ಲಿ ಸೌಹಾರ್ಧ ಕೂಟ ನಡೆಯಿತು.
ಸೌಹಾರ್ಧ ಕೂಟವನ್ನು ನಿವೃತ್ತ ಉಪಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ ಮಧೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ, ಯಕ್ಷಗಾನ ಕಲಾವಿದ ವಾಮನ ಆಚಾರ್ಯ ಬೋವಿಕ್ಕಾನ ಅವರು ಈ ಸಂದರ್ಭ ಮಾತನಾಡಿ ವ್ಯಸನಮುಕ್ತ ಸಮಾಜ ನಾಡಿನ ನಿಜವಾದ ಸಂಪತ್ತು. ಮದ್ಯವರ್ಜನ ಶಿಬಿರಗಳ ಮೂಲಕ ಬದಲಾವಣೆಯ ಹೊಸ ದಿಶೆಯತ್ತ ಮುನ್ನಡೆದ ಜನಜಾಗೃತಿ ವೇದಿಕೆಯ ಶ್ರಮ ಸ್ತುತ್ಯರ್ಹ ಎಂದು ತಿಳಿಸಿದರು.
ಗ್ರಾ.ಪಂ. ಸದಸ್ಯೆ ಅನಿಸಾ ಮನ್ಸೂರ್ ಮಲ್ಲ, ಶೆರೀಫ್ ಕೊಡವಂಜಿ, ಶರೀಫ್ ಮಲ್ಲ, ಮನ್ಸೂರ್ ಮಲ್ಲ, ರಾಜನ್ ಕೊಡವಂಜಿ, ಸೀತಾರಾಮ ಮಾಸ್ತರ್ ಮಲ್ಲ, ಸರಿತಾ ಶಿವನ್ ಮೊದಲಾದವರು ಉಪಸ್ಥಿತರಿದ್ದರು.
ರಾಜನ್ ಮುಳಿಯಾರ್ ಅವರು ವ್ಯಸನ ಮುಕ್ತ ಸಮಾಜದಬಗ್ಗೆ ಉಪನ್ಯಾಸ ನೀಡಿದರು. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಿದ್ದನಕೆರೆ ಜಯಲಕ್ಷ್ಮೀ ಭಟ್ ಸ್ವಾಗತಿಸಿ, ಕಾನತ್ತೂರು ಜಯಲಕ್ಷ್ಮೀ ಭಟ್ ವಂದಿಸಿದರು. ವಲಯ ಮೇಲ್ವಿಚಾರಕಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ನವಜೀವನ ಸಮಿತಿಯ ಜಯರಾಮ, ಚಂದ್ರಶೇಖರ ಮೊದಲಾದವರು ಸಹಕರಿಸಿದರು.


