ಪೆರಡಾಲ : ಮಾನವ ಹಕ್ಕು ದಿನಾಚರಣೆ
0
ಡಿಸೆಂಬರ್ 12, 2018
ಬದಿಯಡ್ಕ: ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದತ್ತ ಹಕ್ಕುಗಳಿದ್ದು ಅವುಗಳನ್ನು ಅನುಸರಿಸಬಹುದು. ಇದರಿಂದ ಇತರಿರಗೆ ತೊಂದರೆಯಾಗಬಾರದು. ನಮ್ಮ ಕರ್ತವ್ಯಗಳನ್ನು ಮರೆಯಬಾರದು ಎಂದು ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ ಶಾಂತಾ ಅವರು ಹೇಳಿದರು.
ಅವರು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂಬಂಧ ವಿಶೇಷ ಪೆÇೀಸ್ಟರ್ ಪ್ರದರ್ಶನ ನಡೆಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಅಧ್ಯಕ್ಷತೆ ವಹಿಸಿದರು. ಅನ್ವರ್ ಓಜೋನ್, ಚಂದ್ರಹಾಸ ನಂಬಿಯಾರ್, ಚಂದ್ರಶೇಖರ, ರಾಜಶೇಖರ್, ಸುಹೈಲ್, ಆಮಿನಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿ, ಎಸ್.ಆರ್.ಜಿ. ಸಂಚಾಲಕ ರಿಶಾದ್ ಪಿ.ಎಂ.ಎ. ವಂದಿಸಿದರು.



