ವರ್ಷಿಣಿ ಆಚಾರ್ಯ ರಾಜ್ಯಮಟ್ಟಕ್ಕೆ ಆಯ್ಕೆ
0
ಡಿಸೆಂಬರ್ 12, 2018
ಬದಿಯಡ್ಕ: ಬದಿಯಡ್ಕದ ನವಜೀವನ ಪ್ರೌಢಶಾಲೆಯಲ್ಲಿ ಜರಗಿದ ಜಿಲ್ಲಾಮಟ್ಟದ ವಿದ್ಯಾರಂಗದ ಕಾರ್ಯಾಗಾರದಲ್ಲಿ ಐಲ ಎಸ್.ಎಸ್.ಬಿ. ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕು.ವರ್ಷಿಣಿ ಆಚಾರ್ಯ 'ಕವಿತಾ ರಚನೆ' ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಈಕೆ ಐಲದ ಹರಿಶ್ಚಂದ್ರ ಆಚಾರ್ಯ ಮತ್ತು ವಿಜಯಲಕ್ಷ್ಮೀ ಆಚಾರ್ಯ ದಂಪತಿಗಳ ಪುತ್ರಿ.


