ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನ ಸಭೆ
0
ಡಿಸೆಂಬರ್ 12, 2018
ಕಾಸರಗೋಡು: ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನ ಸಭೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು. 2018-19 ಹಣಕಾಸು ವರ್ಷದ ವಿವಿಧ ಯೋಜನೆಗಳ ಚಟುವಿಟಕೆಗಳನ್ನು ಚರ್ಚಿಸಲಾಯಿತು. ಸಿಂಡಿಕೆಟ್ ಬ್ಯಾಂಕ್ ವಲಯ ಪ್ರಬಂಧಕ ಆರ್.ಆರ್.ರೆಜಿ ಉದ್ಘಾಟಿಸಿದರು. ಸೆ.30ರಂದು ಸಮಾಪ್ತಿಗೊಂಡ ಅರ್ಧವಾರ್ಷಿಕ ಕಾಲಾವಧಿಯಲ್ಲಿ ಜಿಲ್ಲೆಯ ಬ್ಯಾಂಕ್ ಗಳು ಶೇ 49 ಮೊಬಲಗು ಸಾಲ ರೂಪದಲ್ಲಿ ಮಂಜೂರುಮಾಡಿವೆ. ಜಲದುರಂತದ ಪರಿಣಾಮ ಜಿಲ್ಲೆಯ ಕೃಷಿವಲಯದಲ್ಲಿ ಸಂಭವಿಸಿದ ನಾಶನಷ್ಟಗಳ ಹಿನ್ನೆಲೆಯ ಕುರಿತು ಮಾತುಕತೆ ನಡೆಸಲಾಯಿತು.
ಕೃಷಿ ವಲಯಕ್ಕೆ 1319.57 ಕೋಟಿ ರೂ., ಕಿರು ಉದ್ದಿಮೆ ವಲಯಕ್ಕೆ(ಎಂ.ಎಸ್.ಎಂ.ಇ) 367.25 ಕೋಟಿ ರೂ. ಈ ಅವಧಿಯಲ್ಲಿ ಮಂಜೂರು ಮಾಡಲಾಗಿದೆ. ಆದ್ಯತೆ ವಿಭಾಗಕ್ಕೆ 2033.57 ಕೋಟಿ ರೂ., ಇತರ ವಲಯಗಳಿಗೆ 1046.60 ಕೋಟಿ ರೂ., ಒಟ್ಟು 3080.17 ಕೋಟಿ ರೂ. ಸಾಲವನ್ನು ಜಿಲ್ಲೆಯಲ್ಲಿ ಮಂಜೂರು ಮಾಡಲಾಗಿದೆ. ಆರ್.ಬಿ.ಐ ಪ್ರಬಂಧಕ ವಿ.ಜಯರಾಜ್, ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಸಿ.ಎಸ್.ರಮಣನ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

