ಅಭಿವೃದ್ಧಿ ವಿಚಾರಸಂಕಿರಣ
0
ಡಿಸೆಂಬರ್ 12, 2018
ಕಾಸರಗೋಡು:ಸ್ಥಳೀಯಾಡಳಿತ ಸಂಸ್ಥೆಗಳ ಜೊತೆ ಸಾರ್ವಜನಿಕರು ಕೈಜೋಡಿಸಿದಾಗ ಅಭಿವೃದ್ಧಿ ಚಟುವಟಿಕೆಗಳು ಸಂದರ್ಭೋಚಿತವಾಗಿ ನಡೆದು ನಾಡಿನ ಪ್ರಗತಿ ಸಾಧ್ಯವಾಗುತ್ತದೆ ಎಂದು ಸಂಸದ ಪಿ.ಕರುಣಾಕರನ್ ಅಭಿಪ್ರಾಯಪಟ್ಟರು.
ನೀಲೇಶ್ವರ ನಗರಸಭೆಯಲ್ಲಿ ನಡೆದ 2019-20ರ ಯೋಜನೆಗಳ ರೂಪುರೇಷೆ ಸಂಬಂಧ ನಡೆದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಕುಂಞಿಕೃಷ್ಣನ್ ಕರಡು ರೂಪುರೇಷೆ ಪ್ರಸ್ತುತಗೊಳಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಿ.ರಾಧಾ, ತೋಟತ್ತಿಲ್ ಕುಂಞಿಕಣ್ಣನ್, ಪಿ.ಎಂ.ಸಂಧ್ಯಾ, ಪಿ.ಪಿ.ಮಹಮ್ಮದ್ ರಾಫಿ, ಸದಸ್ಯರಾದ ಏರುವಾಟ್ ಮೋಹನನ್,ಪಿ.ಕುಂಞಿಕೃಷ್ಣನ್, ಪಿ.ಭಾರ್ಗವಿ, ಎಂ.ಸುಜಾತಾ, ನಗರಸಭೆ ಯೋಜನೆ ಸಮಿತಿ ಸದಸ್ಯ ಇಬ್ರಾಹಿಂ ಪರಂಬತ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ವಿವಿಧ ಕಾರ್ಯಕಾರಿ ಗುಂಪುಗಳ ಸಭೆ ಜರುಗಿತು. ಗುಂಪುಗಳ ಅಭಿಮತ ಸಂಗ್ರಹಿಸಿ ನಗರಸಭೆ ಸದಸ್ಯ ಪಿ.ಕುಂಞಿಕೃಷ್ಣನ್ ಮಾತನಾಡಿದರು. ಕಾರ್ಯದರ್ಶಿ ಟಿ.ಮನೋಜ್ ಕುಮಾರ್ ಸ್ವಾಗತಿಸಿದರು. ಸದಸ್ಯೆ ಪಿ.ವಿ.ರಾಧಾಕೃಷ್ಣನ್ ವಂದಿಸಿದರು.

