ಮುಳ್ಳೇರಿಯ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಪವಿತ್ರ ಪಾಣಿ ರಾಧಾಕೃಷ್ಣ ಅಡಿಗ ಅವರಿಗೆ ನೀಡುವ ಮೂಲಕ ಉತ್ಸವ ಸಮಿತಿಯ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿ ಇತ್ತೀಚೆಗೆ ಉದ್ಘಾಟಿಸಿದರು.
ಜಾತ್ರೋತ್ಸವವು ಮಾ.12 ರಿಂದ 20 ರ ವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವುದು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಅತ್ತನಾಡಿ ರಾಮಚಂದ್ರ ಮಣಿಯಾಣಿ ಸರ್ವ ವಿಧದ ಸಹಕಾರವನ್ನು ಸರ್ವಜನರಿಂದ ಆಶಿಸಿದರು. ಹಣಕಾಸು ಸಮಿತಿ ಅದ್ಯಕ್ಷ ಎ.ಗೋಪಾಲ ಮಣಿಯಾಣಿ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಬೆಳ್ಳಪ್ಪಾಡಿ ಸದಾಶಿವ ರೈ ಮಾತನಾಡಿದರು. ಜಾತ್ರೋತ್ಸವ ಸಮಿತಿಯ ಎಲ್ಲಾ ಪದಾ„ಕಾರಿಗಳು ಸಲಹೆ ಸೂಚನೆಗಳನ್ನು ನೀಡಿದರು.
ಪಾರಂಪರಿಕ ಮನೆತನಗಳ ಸದಸ್ಯರು ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾ„ಕಾರಿಗಳು ಮತ್ತು ಹಲವು ಸಂಘ ಸಂಸ್ಥೆಗಳ ಪ್ರತಿನಿ„ಗಳು ಉಪಸ್ಥಿತರಿದ್ದು, ಸರ್ವ ವಿಧದ ಸಹಕಾರಕ್ಕೆ ಭರವಸೆಯನ್ನಿತ್ತರು.
ವೈಧಿಕ ವಿಧಿವಿಧಾನ, ಹಸಿರುವಾಣಿ ಮೆರವಣಿಗೆ, ಅನ್ನ ಸಂತರ್ಪಣೆ, ಶುಚಿತ್ವ, ದೈವಂಕಟ್ಟು ಮಹೋತ್ಸವಗಳು, ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ಬಗ್ಗೆ ಚರ್ಚಿಸಲಾಯಿತು.
ಆರಂಭದಲ್ಲಿ ಉತ್ಸವ ಸಮಿತಿಯ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ಸ್ವಾಗತಿಸಿ, ಕ್ಷೇತ್ರದ ಕಾರ್ಯ ನಿರ್ವಹಣಾ„ಕಾರಿ ಜಗದೀಶ ಪ್ರಸಾದ್ ವಂದಿಸಿದರು. ಕ್ಷೇತ್ರದ ಪ್ರಬಂಧಕ ಗಂಗಾಧರ ರಾವ್ ಕಾರ್ಯಕ್ರಮ ನಿರೂಪಿಸಿದರು.

