ಪೆರ್ಲ: ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದ 15ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಭಾಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ವಾಣೀನಗರ ಸರಕಾರಿ ಶಾಲೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಪ್ಲಸ್ಟು ಕಾಮರ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪ್ರದೀಪ್ ಎಸ್., ದ್ವಿತೀಯ ಮನೋಜ್ ಕುಮಾರ್ ಪಿ., ಹ್ಯುಮೇನಿಟಿಕ್ಸ್ ವಿಭಾಗದಲ್ಲಿ ಪ್ರಥಮ ರಮ್ಯಾ ಪಿ., ದ್ವಿತೀಯ ಸಂಸೀನಾ ಪಿ., ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ಪ್ರಥಮ ವೈಶಾಲಿ ಎನ್. ಹಾಗೂ ಜೀವನ್ ಕುಮಾರ್, ದ್ವಿತೀಯ ಅಶ್ವಿನಿ ಹಾಗೂ ದೀಕ್ಷಿತ್ ಕುಮಾರ್ ಎಂ., ಇವರನ್ನು ಸಂಸ್ಕಾರ ಭಾರತಿ ಲೋಕಕಲಾ ವಿಭಾಗ ಪ್ರಮುಖ್ ದಯಾನಂದ ಕತ್ತಲ್ಸರ್, ಭಜನಾ ಸಂಘದ ಅಧ್ಯಕ್ಷ ಸತ್ಯನಾರಾಯಣ ಭಟ್, ಮಂದಿರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಎನ್., ಶ್ರೀ ವಾಣೀ ಯುವಕ ಮಂಡಲ ವಾಣೀನಗರದ ಅಧ್ಯಕ್ಷ ಶೀನ ನಾಯ್ಕ ಎಂ., ಮಂದಿರದ ಗೌರವಾಧ್ಯಕ್ಷ ಪತ್ತಡ್ಕ ಗಣಪತಿ ಭಟ್ ಮತ್ತಿತರರು ಸಮ್ಮಾನಿಸಿದರು.


