ಸಂಗೀತ ಕಾರ್ಯಕ್ರಮ `ಸುನಾದ ಯುವ ಭಾರತಿ'
ಬದಿಯಡ್ಕ: ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸುವ ಯೋಜನೆಯೊಂದಿಗೆ ಸುನಾದ ಸಂಗೀತ ಕಲಾ ಶಾಲೆಯಿಂದ ಸರಣಿ ಸಂಗೀತ ಕಾರ್ಯಕ್ರಮ `ಸುನಾದ ಯುವ ಭಾರತಿ' ಇತ್ತೀಚೆಗೆ ನಡೆಯಿತು.
ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ವಿದ್ವಾನ್ ಕಾಂಚನ ಈಶ್ವರ ಭಟ್ ಉದ್ಘಾಟಿಸಿದರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಭಾರತೀ ವಿದ್ಯಾ ಪೀಠದ ಸಂಚಾಲಕರಾದ ಜಯಪ್ರಕಾಶ್ ಪಜಿಲ, ಮುಖ್ಯ ಅತಿಥಿಗಳಾದ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಪಂಜಿತ್ತಡ್ಕ ಸಂಗೀತ ಕಲಿಕೆಯಿಂದ ಏಕಾಗ್ರತೆಯು ಹೆಚ್ಚಾಗುತ್ತದೆ ಎಂದರು. ಸಭೆಯಲ್ಲಿ ಸುನಾದ ಸಂಗೀತ ಕಲಾ ಶಾಲೆಯ ಅಧ್ಯಕ್ಷರಾದ ಶಾಮ ಪ್ರಸಾದ್ ಕಬೆಕ್ಕೋಡು ಮತ್ತು ವಿದ್ವಾನ್ ವಾಣಿ ಪ್ರಸಾದ್ ಕಬೆಕ್ಕೋಡು ಉಪಸ್ಥಿತರಿದ್ದರು.
ಶರಣ್ಯ ಶ್ರೀಶ ಕುಮಾರ್ ಪ್ರಾರ್ಥನೆ ಹಾಡಿದರು. ಮಮತ ಸಾವಿತ್ರಿ ಸ್ವಾಗತಿಸಿ, ಸ್ಮಿತಾ ಪಟ್ಟಾಜೆ ವಂದಿಸಿದರು. ರಶ್ಮಿ ಪೆರ್ಮುಖ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ವಾಣಿ ಪ್ರಸಾದ್ ಕಬೆಕ್ಕೋಡು ಹಾಡುಗಾರಿಕೆ ನಡೆಸಿದರು. ವಿದ್ವಾನ್ ವೇಣುಗೋಪಾಲ ಶ್ಯಾನುಭೋಗ್ ವಯಲಿನ್‍ನಲ್ಲಿ, ವಿದ್ವಾನ್ ಕಾಂಚನ ಎ.ಈಶ್ವರ ಭಟ್ ಪುತ್ತೂರು ಮೃದಂಗದಲ್ಲಿ, ವಿದ್ವಾನ್ ಶ್ಯಾಂ ಭಟ್ ಸುಳ್ಯ ಮೋರ್ಸಿಂಗ್‍ನಲ್ಲಿ ಸಹಕರಿಸಿದರು. ಶಮಾತ್ಮಿಕ ಅಜ್ಜಿಮೂಲೆ ಎಲ್ಲಾ ಕಲಾವಿದರನ್ನು ಪರಿಚಯಿಸಿ ಸ್ವಾಗತಿಸಿ, ನಿತೀಶ್ ವಂದಿಸಿದರು.
ಸುನಾದ ಸಂಗೀತ ಕಲಾ ಶಾಲೆಯಿಂದ ಸರಣಿ
0
ಫೆಬ್ರವರಿ 22, 2019