ಉಪ್ಪಳ: ಯಜ್ಞ, ದಾನ, ತಪ್ಪಸ್ಸುಗಳಿಂದ ಭೂಮಿ ಸುಭಿಕ್ಷ ಧರ್ಮಭೂಮಿಯಾಗುತ್ತದೆ. ಭೂಮಿಯ ಮೇಲಿನ ಎಲ್ಲಾ ಕರ್ಮಗಳೂ ಯಜ್ಞಸ್ವರೂಪವಾಗಿದ್ದು, ಜಠರಾಗ್ನಿಗೆ ಅನ್ನ ಸ್ವರೂಪದ ಹವಿಸ್ಸು ಸಮರ್ಪಿಸುತ್ತೇವೆ. ವಿಜ್ಞಾನದ ನಾಗಾಲೋಟದಿಂದ ಇಂದು ಆಧ್ಯಾತ್ಮ ಸೊರಗುತ್ತಿರುವುದು ಆತಂಕಕಾಗಿಯಾಗಿದ್ದು, ಊಧ್ರ್ವಮುಖಿವಾಗಿ ನೋಡುವುದನ್ನು ಮೈಗೂಡಿಸಬೇಕು. ಇಂದಿನ ವಿಜ್ಞಾನ ಸಾಧನೆಯ ಹಿಂದಿನ ಶಕ್ತಿ ಆಧ್ಯಾತ್ಮ ಸಾಧನೆಯೇ ಆಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನಗೈದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಪರಮಪೂಜ್ಯ ಶ್ರೀಯೋಗಾನಂದ ಸರಸ್ವತೀ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ನಡೆದ ಅನುಗ್ರಹ ಸಂದೇಶ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಮಾತನಾಡಿದರು.
ವೇದಗಳನನ್ನು ಅಧ್ಯಯನ-ಅನುಸಂಧಾನ ಮಾಡಿದರೆ ಯಾವುದನ್ನೂ ಸಾಧಿಸಲು ಸಾಧ್ಯ. ಪ್ರಸ್ತುತ ಕಾಶ್ಮೀರದಲ್ಲಿ ಶಾಂತಿ ಸಂಸ್ಕøತಿ ನೆಲೆಗೊಂಡದರೆ ರಾಷ್ಟ್ರ ಪರಿಪೂರ್ಣ ನೆಮ್ಮದಿಯಲ್ಲಿ ಮುನ್ನಡೆಯುವುದು ಖಂಡಿತೆಂದು ತಿಳಿಸಿದ ಅವರು, ಕರ್ಮಯೋಗಿ, ಕಾಯಕಯೋಗಿಗಳ ಜೋಡಣೆಯಾಗಿ ಕೊಂಡೆವೂರಿನ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಸೋಮಯಾಗದಿಂದ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಅವರು ಹಾರೈಸಿದರು.
ಉಪಸ್ಥಿತರಿದ್ದ ಶ್ರೀಕ್ಷೇತ್ರ ಕಣಿಯೂರಿನ ಶ್ರೀಮಹಾಬಲ ಸ್ವಾಮೀಜಿ ಅವರು ಮಾತನಾಡಿ, ಪರಿಸರ,ದೇಹ,ಮನಸ್ಸುಗಳಿಗೆ ಒಳಿತಾಗುತ್ತದೆ. ಮನುಷ್ಯನಾಗಿ ಮಾನವರಾಗಿ ಬಾಳೋಣ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿಯ ಶಂಕರ್ ಟಿವಿ ಚಾನೆಲ್ ಹೊರತಂದ ನಕ್ಷತ್ರೇಷ್ಟಿಯ ಸಾಕ್ಷ್ಯಚಿತ್ರದ ಸಿಡಿಯನ್ನು ಪರಮಪೂಜ್ಯರುಗಳು ಬಿಡುಗಡೆಗೊಳಿಸಿದರು. ಜೊತೆಗೆ ಐಎಎಸ್ ಅಧಿಕಾರಿಗಳಾಗಿ ಸ್ವಯಂ ನಿವೃತ್ತರಾದ ಕೋತಮಂಗಲಮ್ ವಾಸುದೇವನ್ ನಂಬೂದಿರಿ ಅವರನ್ನು ಸನ್ಮಾನಿಸಲಾಯಿತು. ಡಾ.ನಾರಾಯಣ ಭಟ್ಟತ್ತಿರಿಪ್ಪಾಡ್ ಅವರು ಶ್ರೀಯುತರ ಸಾಧನೆಗಳ ವಿಸ್ಕøತ ಪರಿಚಯ ನೀಡಿದರು. ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಗಳು ಉಪಸ್ಥಿತರಿದ್ದರು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಆಧುನಿಕ ವಿಜ್ಞಾನದಶಕ್ತಿ ಆಧ್ಯಾತ್ಮವೇಆಗಿದೆ-ವಜ್ರದೇಹಿ ಶ್ರೀ
0
ಫೆಬ್ರವರಿ 22, 2019