ವಿವಿಗಳ ಸೌಲಭ್ಯಗಳೆಲ್ಲವೂ ಆನ್ ಲೈನ್ ಮೂಲಕ ನಡೆಸಲು ಸಿದ್ಧತೆ
0
ಫೆಬ್ರವರಿ 13, 2019
ಕಾಸರಗೋಡು: ರಾಜ್ಯ ಎಲ್ಲ ವಿವಿಗಳ ಸೇವೆಗಳನ್ನೂ ಆನ್ ಲೈನ್ ಮೂಲಕ ನಡೆಸುವ ಕ್ರಮಗಳು ಪ್ರಗತಿಯಲ್ಲಿವೆ.
ವಿದ್ಯಾರ್ಥಿಗಳಿಗಿರುವ ಸೂಚನೆಗಳಿಂದ ತೊಡಗಿ ಅರ್ಹತಾಪತ್ರಗಳವರೆಗಿನ ಸೌಲಭ್ಯಗಳು ಆನ್ ಲೈನ್ ಮೂಲಕ ಒದಗಿಸುವ ವ್ಯವಸ್ಥೆ ಸಿದ್ಧಗೊಳ್ಳುತ್ತಿದೆ.
ಎಲಿಜಿಬಿಲಿಟಿ, ಇಕ್ವೆಲೆನ್ಸಿ, ಮೈಗ್ರೇಷನ್, ಪ್ರೊಫೆಷನಲ್ ಅರ್ಹತಾಪತ್ರಗಳು, ಅಂಕಪ್ಟಿಗಳು, ಕಾಲೇಜು ಟ್ರಾನ್ಸ್ ಫರ್ ಅರ್ಹತಾಪತ್ರಗಳು, ಪರೀಕ್ಷೆ ಕ್ಯಾಲೆಂಡರ್ , ಮಾಹಿತಿಗಳು, ಪ್ರಧಾನ ದಿನಾಂಕಗಳು, ಆದೇಶಗಳು, ಸಕ್ರ್ಯುಲರ್ ಗಳು ಮೊದಲಾದುವು ಆನ್ ಲೈನ್ ಮೂಲಕ ಲಭಿಸಲು ವ್ಯವಸ್ಥೆ ಏರ್ಪಡಿಸಲಾಗುತ್ತಿದೆ.
ಕಲಿಕೆಗಾಗಿ ಮಾತ್ರ ವಿದ್ಯರ್ಥಿಗಳುಕಾಲೇಜಿಗೆ ಬಂದರೆ ಸಾಕು ಎಂಬ ವ್ಯವಸ್ಥೆ ಒದಗಿಸುವ ಉದ್ದೇಶದೊಂದಿಗೆ ಉನ್ನತ ಶಿಕ್ಷಣ ಇಲಾಖೆ ಈ ಕ್ರಮಕೈಗೊಳ್ಳುತ್ತಿದೆ. ಶುಲ್ಕ ಆನ್ ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ.
ಅರ್ಹತಾಪತ್ರಗಳು ಡಿಜಿಟಲ್ ಓಪ್ ಮೂಲಕ ನೀಡಲಾಗುವುದು. ಎಂ.ಜಿ.ವಿವಿಯ ವಿವಿಧ ಅರ್ಹತಾಪತ್ರಗಳು ಆನ್ ಲೈನ್ ಮೂಲಕ ಲಭಿಸುತ್ತಿವೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಅರ್ಧ ತಾಸಿನಲ್ಲಿ ಸೇವೆ ಒದಗುವ ರೀತಿಯ ವ್ಯವಸ್ಥೆ ಏರ್ಪಡಿಸಲಾಗುತ್ತಿದೆ.
ಸೇವೆಗಳು ಆನ್ ಲೈನ್ ಆಗಿ ಪೂರ್ಣ ರೂಪದಲ್ಲಿ ಬದಲಾಗುವ ಪೂರ್ವಭಾವಿಯಾಗಿ ವಿವಿಗಳಕಂಪ್ಯೂಟರ್ ವಿಭಾಗ ಪರಿಣತರಿಗೆ ಬೇಕಾದ ಮಾರ್ಗದರ್ಶನ ಈಗಾಗಲೇ ನೀಡಲಾಗಿದೆ. ಈ ಮೂಲಕ ಆನ್ ಲೈನ್ ಪ್ರಶ್ನೆ ಪತ್ರಿಕೆ ಮತ್ತು ಆನ್ ಲೈನ್ ಪ್ರಶ್ನೆ ಪತ್ರಿಕೆ ಬ್ಯಾಂಕ್ ಸಿದ್ಧಪಡಿಸಲಾಗುವುದು. ಎಂ.ಜಿ.ವಿವಿಯಲ್ಲಿ ಈಗಾಗಲೇ ಈ ಸೌಲಭ್ಯವಿದೆ. ಕಣ್ಣೂರಿನಲ್ಲಿ ಈ ಸಂಬಂಧ ಸಿದ್ಧತೆಗಳು ಕೊನೆಯ ಹಂತದಲ್ಲಿವೆ. ಪರೀಕ್ಷೆಗೆ ಅರ್ಧ ತಾಸು ತಾಸಿಗೆ ಮುನ್ನ ಆನ್ ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಲಭಿಸುವ ರೀತಿಯ ಸೌಲಭ್ಯ ಏರ್ಪಡಿಸಲಾಗುವುದು. ಪ್ರಾಂಶುಪಾಲರಿಗೆ ಲಭಿಸುವ ಒ.ಪಿ.ಟಿ.ಬಳಸಿ ಪ್ರಶ್ನೆ ಪತ್ರಿಕೆ ಪಡೆಯಲಾಗುತ್ತದೆ. ಸಿ.ಇಸ.ಟಿ.ವಿ.ಕೆಮರ ಬಳಸಿ ಕಾಲೇಜಿನ ಚಟುವಟಿಕೆಗಳ ವೀಕ್ಷಣೆಗೂ ಸೌಲಭ್ಯಗಳಿರುವುವು. ಆನ್ ಲೈನ್ ಪ್ರಶ್ನೆಪತ್ರಿಕೆ ಸೌಲಭ್ಯಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಇತ್ಯಾದಿ ಪಿಡುಗುಗಳ ನಿಯಂತ್ರಣ ಸಾಧ್ಯವಾಗಲಿದೆ.
ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳು,ಲೈಬ್ರರಿ ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ. ಕಾಲೇಜುಗಳ, ವಿವಿಗಳನ್ನು ಸಂಪರ್ಕಿಸುವ ವೀಡಿಯೋ ಕಾನ್ ಫೆರೆನ್ಸ್ ಸೌಲಭ್ಯ ಎಲ್ಲ ಕಡೆಯಲ್ಲೂ ಏರ್ಪಡಿಸಲಾಗುವುದು. ಸ್ಟೂಡೆಂಟ್ ಗ್ರಿವೆನ್ಸ್ ಸೆಲ್ ಗಳೂ ಆನ್ ಲೈನ್ ನಲ್ಲಿ ಇರುವುದು.

