ಪಡಿತರ ಚೀಟಿ ವಿತರಣೆ
0
ಫೆಬ್ರವರಿ 13, 2019
ಕಾಸರಗೋಡು: 2018 ಆಗಸ್ಟ್ , ಸೆಪ್ಟೆಂಬರ್ ತಿಂಗಳಲ್ಲಿ ನೂತನ ಪಡಿತರ ಚೀಟಿಗಳಿಗಾಗಿ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿದ ಟೋಕನ್ ನಂಬ್ರ 4000ದಿಂದ 5000 ವರೆಗಿನವರಿಗೆ ಫೆ.15ರಂದು, 5001ರಿಂದ 6000 ವರೆಗಿನವರಿಗೆ ಫೆ.16ರಂದು ಹೊಸದುರ್ಗ ಸಪ್ಲೈ ಕಚೇರಿಯಲ್ಲಿ ವಿತರಣೆ ನಡೆಯಲಿದೆ. ಪಟ್ಟಿಯಲ್ಲಿ ಹೆಸರು ಹೊಂದಿದವರು ಅಸಲಿ ಪಡಿತರ ಚೀಟಿ, ಟೋಕನ್, ನೂತನ ಕಾರ್ಡ್ ನ ಮೌಲ್ಯ ಸಹಿತ ಅರ್ಜಿದಾರರು ಹಾಜರಾಗಬೇಕು. ಹಾಜರಾಗಲು ಸಾಧ್ಯವಾಗದೇ ಇರುವವರಿಗೆ ಫೆ.21 ರ ನಂತರ ಕಚೇರಿಯಲ್ಲಿ ಪಡಿತರ ಚೀಟಿ ವಿತರಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ.

