ಬದಿಯಡ್ಕ: ಬದಿಯಡ್ಕ ಪಂಚಾಯತಿ ಬಂಟರ ಮಾತೃ ಸಂಘದ ವಾರ್ಷಿಕ ಮಹಾಸಭೆ, ಶ್ರೀಕೊರತ್ತಿ ಬಂಟ್ಸ್ ಮಹಿಳಾ ಭಜನಾ ಸಂಘದ ವಾರ್ಷಿಕೋತ್ಸವ ಮತ್ತು ಗುರುವಂದನೆ ಕುಂಬಳೆ ಫಿರ್ಕಾ ಬಂಟರ ಸಂಘದ ಬದಿಯಡ್ಕದಲ್ಲಿರುವ ಕಾರ್ಯಾಲಯದಲ್ಲಿ ಭಾನುವಾರ ಜರಗಿತು.
ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ.ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲ ಗುತ್ತು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಡಿ ಬೆಳೆದು ಬಂದಿರುವ ಬಂಟರಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಬಂಟ ಮಹಿಳೆಯರು ಇಂದು ಸಮಾಜದ ವಿವಿಧ ವಲಯಗಳ ಅತ್ಯುಚ್ಚ ಸ್ಥಾನದಲ್ಲಿ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇನ್ನಷ್ಟು ಸಂಘಟನಾತ್ಮಕ ಬಲಗೊಳ್ಳುವಿಯ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.
ಕುಂಬಳೆ ಫಿರ್ಕಾ ಬಂಟರ ಸಂಘದಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿ, ಬಂಟ್ಸ್ ಮಹಿಳಾ ಭಜನಾ ಮಂಡಳಿಯು ಭಜನಾ ಸಂಕೀರ್ತನೆಯ ಮೂಲಕ ಮನೆ-ಮನದ ಬೆಳಗುವಿಕೆಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು. ಬ್ಲಾಕ್ ಪಂಚಾಯತಿ ಸದಸ್ಯ ಅವಿನಾಶ ರೈ ವಳಮಲೆ, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ, ಕುಂಬಳೆ ಫಿರ್ಕಾ ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಉಪಸ್ಥಿತರಿದ್ದು ಶುಭಹಾರೈಸಿದರು.
ಉಮೇಶ್ ರೈ ಮೇಗಿನ ಕಡಾರು, ಕೃಷ್ಣಪ್ರಸಾದ ರೈ, ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ವಳಮಲೆ, ದಯಾನಂದ ರೈ, ಶಾಮ ಆಳ್ವ ಉಪಸ್ಥಿತರಿದ್ದರು. ಮಾತೃ ಸಮಿತಿ ಕಾರ್ಯದರ್ಶಿ ವಾರ್ಷಿಕ ವರದಿ-ಲೆಕ್ಕಪತ್ರ ಮಂಡಿಸಿದರು. ಭಜನಾ ತರಬೇತಿ ನೀಡುತ್ತಿರುವ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಬಂಟರ ಸಂಘದ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ರಾಜೇಶ್ವರಿ ರೈ ವಂದಿಸಿದರು.

