ಅರಂತೋಡು ಕ್ಷೇತ್ರ ವಾರ್ಷಿಕ ಜಾತ್ರಾ ಉತ್ಸವ
0
ಫೆಬ್ರವರಿ 10, 2019
ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಫೆ.17 ರಂದು ಬ್ರಹ್ಮಶ್ರೀ ವಿಷ್ಣುಪ್ರಕಾಶ ಪಟ್ಟೇರಿ ಕಾವುಮಠ ಇವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಫೆ.17 ರಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, 8ಕ್ಕೆ ಶತರುದ್ರಾಭಿಷೇಕ, 9ರಿಂದ ಪರಕ್ಕಿಲದ ಶ್ರೀಮಹಾದೇವ ಶಾಸ್ತಾ ವಿನಾಯಕ ಭಜನಾ ಸಂಘ, ಹಾಗೂ ಪದ್ಮಪ್ರಿಯಾ ಮಹಿಳಾ ಭಜನಾ ಸಂಘ ಕಾಸರಗೋಡು ತಂಡದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. 12.30 ರಿಂದ ರವಿಶಂಕರ ಚೇನಕ್ಕೋಡು, ನಾರಾಯಣ ತುಂಗ, ಗೋಪಾಲಕೃಷ್ಣ ನಾವಡ ಹಾಗೂ ಮುರಳೀಮಾಧವ ಅವರುಗಳಿಂದ ಯಕ್ಷ ಗಾನ ವೈಭವ ನಡೆಯಲಿದೆ. ಸಂಜೆ 5 ರಿಂದ ಭಜನಾ ಸಂಕೀರ್ತನೆ, 6.30ಕ್ಕೆ ದೀಪಾರಾಧನೆ, 7 ರಿಂದ ಸಾಮೂಹಿಕ ಕಾರ್ತಿಕ ಪೂಜೆ, ಶ್ರೀಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಶ್ರೀವಿಷ್ಣುಮೂರ್ತಿ ಹಾಗೂ ರಕ್ತೇಶ್ವರಿ ದೈವಗಳಿಗೆ ತಂಬಿಲ ಸೇವೆ, ಅನ್ನದಾನ ನಡೆಯಲಿದೆ. ಸಂಜೆ ಉಳಿಯ ಶ್ರೀಧನ್ವಂತರೀ ಸನ್ನಿಧಿಯಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಹೊರಟು ಶ್ರೀಕ್ಷೇತ್ರಕ್ಕೇ ಆಗಮಿಸಲಿದೆ. ಫೆ.18 ರಂದು ಬೆಳಿಗ್ಗೆ 8 ರಿಂದ ಶ್ರೀವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ.

