ಬೇಡಡ್ಕ ಸಾಮಾಜಿಕ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಯಾಗಿ ಬಡ್ತಿ : ಆರೋಗ್ಯ ಸಚಿವೆ ಘೋಷಣೆ
0
ಫೆಬ್ರವರಿ 10, 2019
ಮುಳ್ಳೇರಿಯ: ಬೇಡಡ್ಕ ಸಾಮಾಜಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಬಡ್ತಿಗೊಳಿಸಿರುವುದಾಗಿ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಶನಿವಾರ ಘೋಷಿಸಿದರು.
ಜಿಲ್ಲೆಯ ಪೂರ್ವಭಾಗದ ಮಲೆನಾಡ ಪ್ರದೇಶದ ಸಾವಿರಾರು ಮಂದಿಯ ಏಕೈಕ ಆಸರೆಯಾಗಿರುವ ಬೇಡಡ್ಕ ಸಾಮಾಜಿಕ ಆರೋಗ್ಯ ಕೇಂದ್ರ ಬಡ್ತಿ ಪಡೆದಿರುವ ಮೂಲಕ ಜನತೆಯ ಆನೇಕ ವರ್ಷಗಳ ಬಯಕೆ ಈಡೇರಿದೆ. ಇನ್ನು ಮುಂದೆ ಇಲ್ಲಿ ಹೆಚ್ಚುವರಿ ಉತ್ತಮ ಚಿಕಿತ್ಸೆ ಲಭಿಸುವ ನಿರೀಕ್ಷೆ ಇರಿಸಲಾಗಿದೆ.
ಶಾಸಕಕೆ.ಕುಂಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಸಿ.ರಾಮಚಂದ್ರನ್, ವಿ.ಜೆ.ಲಿಸಿ, ಖಾಲಿದ್ ಬೆಳ್ಳಿಪ್ಪಾಡಿ, ಮುಸ್ತಫ ಹಾಜಿ, ಅನುಸೂಯ ರೈ, ಎಂ.ಲತಾ, ಫಾತಿಮತ್ ಸುಹರಾ, ಬೇಡಡ್ಕ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಕೆ.ರಮಣಿ, ಕುತ್ತಿಕೋಲ್ ಗ್ರಾಮಪಂಚಾಯತಿ ಉಪಾಧ್ಯಕ್ಷ ಪಿ.ಗೋಪಿನಾಥ್, ಜಿಲ್ಲಾ ಪಂಚಾಯತಿ ಸದಸ್ಯ ಎಂ.ನಾರಾಯಣನ್, ಕಾರಡ್ಕ ಬ್ಲಾಕ್ ಪಂಚಾಯತಿ ಆರೋಗ್ಯ-ಶಿಕ್ಷಣ ಸ್ಥಾಯೀಸಮಿತಿ ಅಧ್ಯಕ್ಷೆ ಬಿಂದು ಶ್ರೀಧರ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಬೇಡಡ್ಕ ಗ್ರಾಮಪಂಚಾಯತಿ ಆರೋಗ್ಯ -ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎಂ.ಧನ್ಯಾ, ಕಾರಡ್ಕ ಬ್ಲಾಕ್ ಪಂಚಾಯತಿ ಸದಸ್ಯ ಎಂ.ಬಾಲನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್, ಎನ್.ಎಚ್.ಎಂ.ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಮನ್ ಸ್ವಾತಿ ವಾಮನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ಅನಂತನ್, ಸಿ.ಕುಂಞÂಕೃಷ್ಣನ್ ಮಾಡಕಲ್, ಕೆ.ಕುಂಞÂರಾಮನ್, ಕೆ.ಟಿ.ಪುರುಷೋತ್ತಮನ್, ಬೇಡಡ್ಕ ಕೃಷಿಕರ ಸೆವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ.ದಾಮೋದರನ್, ಬೇಡಡ್ಕ ಮಹಿಳಾ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ವಿ.ಕೆ.ಗೌರಿ, ವ್ಯಾಪಾರಿ ವ್ಯವಸಾಯಿ ಪ್ರತಿನಿಧಿ ಇ.ರಾಘವನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪ್ರತಿನಿಧಿ ಪಿ.ರಾಘವನ್ ಮೊದಲಾದವರು ಉಪಸ್ಥಿತರಿದ್ದರು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್ ಸ್ವಾಗತಿಸಿ, ಬೇಡಡ್ಕ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ಲೇಖಾ ವಂದಿಸಿದರು.

