ಶ್ರೀ ವೆಂಕಟ್ರಮಣ ಕ್ಷೇತ್ರದ ತೃತೀಯ ಹಂತದ ಕಾಮಗಾರಿಗೆ ಚಾಲನೆ
0
ಫೆಬ್ರವರಿ 10, 2019
ಮುಳ್ಳೇರಿಯ: ಮುಳಿಯಾರು ಗ್ರಾಮದ ಅಮ್ಮಂಗೋಡು ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿ ಭೈರವ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರದ 3ನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಖ್ಯಾತ ಶಿಲ್ಪಿ ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ ಕಾಮಗಾರಿಗೆ ªಚಾಲನೆ ನೀಡಿದರು. ಶಿಲ್ಪಿಗಳಾದ ಚಂದ್ರಶೇಖರ ಆಚಾರ್ಯ ಪ್ರಕಾಶ ಆಚಾರ್ಯ, vಜಯ ಆಚಾರ್ಯ ಸಹಕರಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಮನ ಆಚಾರ್ಯ ಬೋವಿಕ್ಕಾನ, ಕ್ಷೇತ್ರ ಅಧ್ಯಕ್ಷ ವಸಂತ ಮಂಗಳೂರು, ಕಾರ್ಯದರ್ಶಿ ಅಪ್ಲುಟ್ಟ, ವೆಂಕಟೇಶ, ಈಶ್ವರ, ವಸಂತ, ಅಜಿತ್, ಬಾಬು ಸುಂದರ, ರಾಧಾಕೃಷ್ಣ ಉಪಸ್ಥಿತರಿದ್ದರು.

