ಸ್ನೇಹ ಸಾಂತ್ವನಂ ಉದ್ಘಾಟನೆ
0
ಫೆಬ್ರವರಿ 10, 2019
ಮುಳ್ಳೇರಿಯ: ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಪಾಲಿಯೇಟಿವ್ ಸ್ನೇಹ ಸಾಂತ್ವನಂ ಕಾರ್ಯಕ್ರಮವನ್ನು ಕಾರಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೋದನ್ ನಂಬ್ಯಾರ್ ಇತ್ತೀಚೆಗೆ ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾದೇವಿ, ಸದಸ್ಯರಾದ ಪುರುಷೋತ್ತಮನ್, ಗೋಪಾಲಕೃಷ್ಣ, ಶ್ರೀವಿದ್ಯಾ , ಸಿಡಿಎಸ್ ಅಧ್ಯಕ್ಷೆ ಗೀತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

