HEALTH TIPS

ರಾಜ್ಯ ಸರಕಾರ-ಸಾವಿರ ದಿನ ಪೂರ್ಣ-ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಗಳಿಗೆ ಚಾಲನೆ: ಕಾಞÂಂಗಾಡಿನಲ್ಲಿ ವರ್ಣರಂಜಿತ ಮೆರವಣಿಗೆ

ಕಾಸರಗೋಡು: ರಾಜ್ಯ ಸರಕಾರ ಒಂದು ಸಾವಿರ ದಿನಪೂರೈಸಿದ ವಿಚಾರವನ್ನು ಸರಣಿ ಕಾರ್ಯಕ್ರಮಗಳ ಮೂಲಕ ಆಚರಿಸುವ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ಲಭಿಸಿದೆ. ಕಾಞÂಂಗಾಡ್ ನಲ್ಲಿ ಬುಧವಾರ ಸಂಜೆ ನಡೆದ ವರ್ಣರಂಜಿತ ಮೆರವಣಿಗೆ ಮೂಲಕ ಒಂದು ವಾರಗಳ ಕಾಲ ನಡೆಯುವ ಈ ಸರಣಿ ಕಾರ್ಯಕ್ರಮಗಳಿಗೆ ಶುಭಾರಂಭವಾಗಿದೆ. ಜಿಲ್ಲೆಯ ಅತ್ಯಧಿಕ ಜನಸಹಭಾಗಿತ್ವ ಇದ್ದ ಮೆರವಣಿಗೆ ಪುದಿಯಕೋಟೆ ಮಾಂತೋಪ್ ಮೈದಾನದಲ್ಲಿ ಆರಂಭಗೊಂಡು ಕಾ?ಂಗಾಡ್ ನಗರದಲ್ಲಿಪರ್ಯಟನೆ ನಡೆಸಿ ನೋರ್ತ್ ಕೋಟೆಚ್ಚೇರಿಯಲ್ಲಿ ಸಮಾಪ್ತಿಗೊಂಡಿತು. ಕಾಞÂಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯ್, ಕಾಞÂಂಗಾಡ್ ನಗರಸಭೆ ಉಪಾಧ್ಯಕ್ಷೆ ಎನ್ ಸುಲೈಖಾ, ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳಸಿಬ್ಬಂದಿ, ಸಾರ್ವಜನಿಕರು ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಮುತ್ತುಕೊಡೆ, ಶೀಂಗಾರಿ-ಬ್ಯಾಂಡ್ ಮೇಳ ಗಮನಸೆಳೆದುವು. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರಮೃತ್ಯು ಪಡೆದ ಭಾರತೀಯ ಯೋಧರ ಕುರಿತು ಕಲಾವಿದ ಪಾರ್ಕೋ ಅತಿಯಾಂಬೂರ್ ಅವರು ಪ್ರಸ್ತುತ ಪಡಿಸಿದ ಪ್ಲೋಟ್ ಜನಾಕರ್ಷಣೆ ಪಡೆಯಿತು. ಕಾಞÂಂಗಾಡ್ ನಗರಸಭೆ, ಅಜಾನೂರು, ಪಳ್ಳಿಕ್ಕರೆ, ಪುಲ್ಲೂರು-ಪೆರಿಯ, ಮಡಿಕೈ ಗ್ರಾಮಪಂಚಾಯತ್ ಗಳ ಕುಟುಂಬಶ್ರೀ ಸದಸ್ಯೆಯರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆರೋಗ್ಯ ಕಾರ್ಯಕರ್ತರು, ಎನ್.ಸಿಸಿ, ಎನ್.ಎಸ್.ಎಸ್. ಸ್ವಯಂಸೇವಕರು, ವಿದ್ಯಾರ್ಥಿ ಪೊಲೀಸರು, ಜ್ಯೂನಿಯರ್ ರೆಡ್ ಕ್ರಾಸ್, ವ್ಯಾಪಾರಿಗಳು, ಲಯನ್ಸ್, ರೋಟರಿ ಕ್ಲಬ್ ಪ್ರತಿನಿಧಿಗಳು, ಹರಿತ ಕ್ರಿಯಾ ಸೇನೆ, ಮಹಿಳಾ ಒಕ್ಕೂಟಗಳ ಸದಸ್ಯೆಯರು, ಬಾಡಿಗೆ ವಾಹನಚಾಲಕರು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ಮೆರವಣಿಗೆಯ ನಂತರ ನೋರ್ತ್ ಕೋಟೆಚ್ಚೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಞÂಂಗಾಡ್ ನಗರಸಭೆ ಅಧ್ಯಕ್ಷ ವಿ.ಇವ.ರಮೆಶನ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯ್, ನಗರಸಭೆ ಉಪಾಧ್ಯಕ್ಷೆ ಎನ್.ಸುಲೈಖಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಎನ್.ಉಣ್ಣಿಕೃಷ್ಣನ್, ಟಿ.ವಿ.ಭಾಗೀರಥಿ, ಗಂಗ ರಾಧಾಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries