ಗೈಡ್ಸ್ ಮತ್ತು ಬುಲ್ ಬುಲ್ ಉದ್ಘಾಟನೆ
0
ಫೆಬ್ರವರಿ 21, 2019
ಕುಂಬಳೆ: ಇಲ್ಲಿನ ಸೈಂಟ್ ಮೋನಿಕ ಶಾಲೆಯಲ್ಲಿ ಭಾರತ್ ಗೈಡ್ಸ್ ಮತ್ತು ಬುಲ್ ಬುಲ್‍ನ್ನು ಉದ್ಘಾಟಿಸಲಾಯಿತು. ಅತಿಥಿಗಳಾಗಿ ಹಾಗು ತರಬೇತುದಾರರಾಗಿ ಬಜ್ಪೆಯ ಹೋಲಿ ಫ್ಯಾಮಿಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಭಗಿನಿ ಲೋಲಿಟಿ ಪಿರೇರಾ ಹಾಗು ಶಾಲಾ ಮುಖ್ಯೋಪಾಧ್ಯಾಯ ಫಾದರ್ ಅನಿಲ್ ಪ್ರಕಾಶ್ ಡಿ'ಸಿಲ್ವಾ ಉಪಸ್ಥಿತರಿದ್ದರು.
ಭಗಿನಿ ಸಿಸ್ಟರ್ ಲೋಲೀಟ ಅವರು ಗೈಡ್ಸ್ ಮತ್ತು ಬುಲ್ ಬುಲ್‍ನ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಬ್ಯಾಡ್ಜ್ ಹಾಗು ಸ್ಕಾರ್ಫ್‍ಗಳನ್ನು ನೀಡಿದರು. ತರಬೇತಿಯಲ್ಲಿ ಅವರು ಗೈಡ್ಸ್ ಹಾಗು ಬುಲ್ ಬುಲ್‍ನ ಇತಿಹಾಸ, ಪ್ರಾರ್ಥನೆ, ಧ್ವಜ ಗೀತೆ, ಮಹತ್ವ, ಪ್ರತಿಜ್ಞೆ ಮತ್ತು ಪಾಲನಾ ಕ್ರಮಗಳನ್ನು ಸವಿವರವಾಗಿ ತಿಳಿಸಿದರು. ಅವರು ವಿದ್ಯಾರ್ಥಿಗಳನ್ನು ಹೊಂದಿದ 4 ಪೆಟ್ರೋಲ್‍ಗಳನ್ನು ರಚಿಸಿದರು ಹಾಗು ಅವುಗಳಿಗೆ ಹೂವಿನ ಹಾಗು ಪಕ್ಷಿಗಳ ಹೆಸರುಗಳನ್ನಿರಿಸಿದರು.
ಮುಖ್ಯೋಪಾಧ್ಯಾಯರು ಸಾಂದರ್ಭಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಆಶಿಕ ಗೈಡ್ಸ್ ಹಾಗು ಮೈತ್ರಿ ಬುಲ್ ಬುಲ್‍ನ ದಳಗಳ ನೇತೃತ್ವ ವಹಿಸುವರು.

