ಗ್ರಾಮೀಣ ಶಾಲೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ನಿಟ್ಟೆ ವಿಶ್ವವಿದ್ಯಾಲಯ ಜಂಟಿಯಾಗಿ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳ ಅರ್ಹ ಶಾಲೆಗಳನ್ನು ಗುರುತಿಸಿ, ಗಡಿನಾಡಿನ ಅತ್ಯುತ್ತಮ ಕನ್ನಡ ಶಾಲೆಯಾಗಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಆಯ್ಕೆಗೊಂಡಿತ್ತು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು, ಮುಖ್ಯೋಪಾಧ್ಯಾಯ ಗಿರೀಶ ಎನ್., ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಪತಿ ಕಡಂಬಳಿತ್ತಾಯ, ಮಾತೃಸಂಘದ ಅಧ್ಯಕ್ಷೆ ಜಯಂತಿ, ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಜೊತೆಗಿದ್ದು ಪ್ರಶಸ್ತಿ ಪಡೆದುಕೊಂಡರು.
ಎನಂತಾರೆ?:
ಕೇರಳ ರಾಜ್ಯದಲ್ಲಿ ಕನ್ನಡದ ನಿರಂತರ ಅವಗಣನೆ ನಡೆಯುತ್ತಿರುವ ಸಂದರ್ಭದಲ್ಲಿ ಗಡಿನಾಡಿನ ಶಾಲೆಯನ್ನು ಗುರುತಿಸಿರುವುದು ಕನ್ನಡಗರಿಗೆ ಹಾಗೂ ಕಾಸರಗೋಡಿಗೆ ಹೆಮ್ಮೆಯ ವಿಚಾರವಾಗಿದೆ.
- ಗಿರೀಶ ಎನ್. ಮುಖ್ಯೋಪಾಧ್ಯಾಯ
............................
ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಶ್ರಮಪಡುತ್ತಿರುವ ಕಾಲಘಟ್ಟದಲ್ಲಿ ನಮಗೆ ಈ ಪ್ರಶಸ್ತಿ ಒದಗಿಬಂದಿರುವುದು ಬೆನ್ನುತಟ್ಟಿ ಪ್ರೋತ್ಸಾಹವನ್ನು ನೀಡಿದಂತಾಗಿದೆ. ಮುಂದೆಯೂ ಕನ್ನಡ ಶಾಲೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ಊರ ಜನರ ಸಹಕಾರವನ್ನು ಕೋರುತ್ತೇವೆ.
- ನಾರಾಯಣ ಶರ್ಮ ಬಳ್ಳಪದವು, ಶಾಲಾ ವ್ಯವಸ್ಥಾಪಕ.ಗಡಿನಾಡಿನ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ ಅಗಲ್ಪಾಡಿಗೆ
0
ಮಾರ್ಚ್ 19, 2019
ಬದಿಯಡ್ಕ: ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಹಾಗೂ ದೇರಳೆಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ದೇರಳೆಕಟ್ಟೆಯ ನಿಟ್ಟೆ ವಿವಿ ಕ್ಯಾಂಪಸ್‍ನ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿ -2018 ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅಗಲ್ಪಾಡಿ ಶಾಲಾ ಅಧಿಕೃತರು ವಿದ್ಯಾರ್ಥಿಗಳೊಂದಿಗೆ ಮೂರುಲಕ್ಷ ರೂ ನಗದು ಹಾಗೂ ವಿಶೇಷ ಪ್ರಶಸ್ತಿಪತ್ರವನ್ನು ಪಡೆದುಕೊಂಡರು. ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಪ್ರಶಸ್ತಿ ವಿತರಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಾಲೆ ಆಯ್ಕೆ ಸಮಿತಿ ಸದಸ್ಯರುಗಳಾದ ಕುದಿ ವಸಂತ ಶೆಟ್ಟಿ, ಪ್ರವೀಣ ಕುಮಾರಿ ಹಾಗೂ ಶಂಕರನಾರಾಯಣ ಅವರನ್ನು ಗೌರವಿಸಲಾಯಿತು.
ಸಹ ಕುಲಾಧಿಪತಿ ಪ್ರೊ. ಡಾ.ಎಂ.ಶಾಂತಾರಾಮ ಶೆಟ್ಟಿ ಹಾಗೂ ವಿವಿಯ ಆರ್ಥಿಕ ಹಾಗೂ ಅಭಿವೃದ್ಧಿ ನಿರ್ದೇಶಕ ಡಾ.ರಾಜೇಂದ್ರ ಎಂ., ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ಸಹಕುಲಾಧಿಪತಿ ಎನ್.ವಿಶಾಲ್ ಹೆಗ್ಡೆ ಉಪಸ್ಥಿತರಿದ್ದರು.
ಗ್ರಾಮೀಣ ಶಾಲೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ನಿಟ್ಟೆ ವಿಶ್ವವಿದ್ಯಾಲಯ ಜಂಟಿಯಾಗಿ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳ ಅರ್ಹ ಶಾಲೆಗಳನ್ನು ಗುರುತಿಸಿ, ಗಡಿನಾಡಿನ ಅತ್ಯುತ್ತಮ ಕನ್ನಡ ಶಾಲೆಯಾಗಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಆಯ್ಕೆಗೊಂಡಿತ್ತು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು, ಮುಖ್ಯೋಪಾಧ್ಯಾಯ ಗಿರೀಶ ಎನ್., ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಪತಿ ಕಡಂಬಳಿತ್ತಾಯ, ಮಾತೃಸಂಘದ ಅಧ್ಯಕ್ಷೆ ಜಯಂತಿ, ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಜೊತೆಗಿದ್ದು ಪ್ರಶಸ್ತಿ ಪಡೆದುಕೊಂಡರು.
ಎನಂತಾರೆ?:
ಕೇರಳ ರಾಜ್ಯದಲ್ಲಿ ಕನ್ನಡದ ನಿರಂತರ ಅವಗಣನೆ ನಡೆಯುತ್ತಿರುವ ಸಂದರ್ಭದಲ್ಲಿ ಗಡಿನಾಡಿನ ಶಾಲೆಯನ್ನು ಗುರುತಿಸಿರುವುದು ಕನ್ನಡಗರಿಗೆ ಹಾಗೂ ಕಾಸರಗೋಡಿಗೆ ಹೆಮ್ಮೆಯ ವಿಚಾರವಾಗಿದೆ.
- ಗಿರೀಶ ಎನ್. ಮುಖ್ಯೋಪಾಧ್ಯಾಯ
............................
ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಶ್ರಮಪಡುತ್ತಿರುವ ಕಾಲಘಟ್ಟದಲ್ಲಿ ನಮಗೆ ಈ ಪ್ರಶಸ್ತಿ ಒದಗಿಬಂದಿರುವುದು ಬೆನ್ನುತಟ್ಟಿ ಪ್ರೋತ್ಸಾಹವನ್ನು ನೀಡಿದಂತಾಗಿದೆ. ಮುಂದೆಯೂ ಕನ್ನಡ ಶಾಲೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ಊರ ಜನರ ಸಹಕಾರವನ್ನು ಕೋರುತ್ತೇವೆ.
- ನಾರಾಯಣ ಶರ್ಮ ಬಳ್ಳಪದವು, ಶಾಲಾ ವ್ಯವಸ್ಥಾಪಕ.