HEALTH TIPS

ಸಮರಸ ಶಬ್ದಾಂತರಂಗ ಸೌರಭ_ಸಂಚಿಕೆ-14-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

  ಮೂರು ಟಿಪ್ಪಣಿಗಳು ಇಲ್ಲಿವೆ.

೧.  ‘ಸಮಾಜೋ ಆರ್ಥಿಕ’ ಎಂಬ ದುರ್ಬುದ್ಧಿಜೀವಿಗಳ ವಾಂತಿ

Socio economic ಎಂಬ ಇಂಗ್ಲಿಷ್ ಪದಪುಂಜವನ್ನು ಅದ್ಯಾವುದೋ ದುರ್ಬುದ್ಧಿಜೀವಿಯೊಂದು ‘ಸಮಾಜೋ ಆರ್ಥಿಕ’ ಎಂದು ಕೆಟ್ಟ ರೀತಿಯ ತರ್ಜುಮೆ ಮಾಡಿದೆ. ಆಮೇಲೆ ಮಿಕ್ಕ ದುರ್ಬುದ್ಧಿಜೀವಿಗಳೂ ಅದನ್ನೇ ಬಳಸತೊಡಗಿವೆಪ್ರಜಾವಾಣಿಯಲ್ಲಿ ವಾರಕ್ಕೊಮ್ಮೆಯಾದರೂ ಈ ಪದಪುಂಜ ಕಾಣಿಸಿಕೊಳ್ಳುತ್ತದೆ. ಮೊದಲೇ ದುರ್ಬುದ್ಧಿಜೀವಿಗಳ ಮಾತುಗಳು ಬರಹಗಳು ಅರ್ಥವೇ ಇರದಇದ್ದರೂ ಸುಲಭದಲ್ಲಿ ಅರ್ಥ ಆಗದ ನುಡಿ-ಭೇದಿ (verbal diarrhea) ಆಗಿರುತ್ತವೆಸಂಸ್ಕೃತದ್ವೇಷಿಗಳಾಗಿಯೂತಲ್ಲಣ ಪಲ್ಲಟ ಅಸ್ಮಿತೆ ತಲಸ್ಪರ್ಶಿ ಮುಂತಾದ ಸಂಸ್ಕೃತ ಪದಗಳನ್ನು ಬಳಸಿದರೇನೇ ತಮ್ಮ ಬರವಣಿಗೆಗೆ ತೂಕ ಎಂದು ಅವುಗಳದೊಂದು ಭ್ರಮೆ ಇರುತ್ತದೆ. ಅಂಥದರಲ್ಲಿ ಈಗ ‘socio' ಎಂಬ ಇಂಗ್ಲಿಷ್ ಪದಕ್ಕೆ ’ಸಮಾಜೋ’ ಎಂಬ ತರ್ಜುಮೆ ಬೇರೆ. ಬಹುಶಃ ‘ಆಂಗ್ಲೊ ಇಂಡಿಯನ್’ ಎಂಬ ಪದಪುಂಜವನ್ನು ಮಾದರಿಯಾಗಿಟ್ಟು ಮಾಡಿರುವ ವಿಕೃತಿ ಇದು. ಅದರಲ್ಲೂ ಆಂಗ್ಲ ಎಂದರೆ ಇಂಗ್ಲಿಷ್ (ಬ್ರಿಟಿಷ್)‌ನ ಸಂಸ್ಕೃತ/ಕನ್ನಡ ರೂಪ ಎಂದು ತಿಳಿದುಕೊಂಡಿರುವ ಅಜ್ಞಾನ. Anglus ಎಂಬ ಲ್ಯಾಟಿನ್ ಮೂಲದಿಂದ ಬಂದದ್ದು Anglo. ಅದು ಹಾಗಿದೆಯಂತ socio = ಸಮಾಜೋ ಎಂದು ಮಾಡಲಿಕ್ಕಾಗುವುದಿಲ್ಲ. ಏಕೆಂದರೆ ‘ಸಮಾಜ’ದಂಥ ಸಂಸ್ಕೃತ ಮೂಲದ ಪದಗಳು ಆ ರೂಪವನ್ನು ಪಡೆಯುವುದಿಲ್ಲತಲೆಯಿಲ್ಲದ ದುರ್ಬುದ್ಧಿಜೀವಿಗಳಿಗೆ ಹೇಳುವವರ್ಯಾರುಈಗಿನ್ನು Indo Arabic ಅಂಕಿಗಳು ಎನ್ನಲು ‘ಭಾರತೋ ಅರೇಬಿಕ್  ಅಂಕಿಗಳುTrigono-metry ಎನ್ನಲು ತ್ರಿಭುಜೋ-ಮಾಪನ, Hydroelectricಗೆ ನೀರೋ-ವಿದ್ಯುತ್ ಅಂತೆಲ್ಲ ಕೇಳಿಬಂದರೆ/ಕಾಣಸಿಕ್ಕರೆ ಆಶ್ಚರ್ಯವಿಲ್ಲ.


ಹಾಗಾದರೆ Socio economicಗೆ ಸೂಕ್ತ ಅನುವಾದ ಏನುಸಾಮಾಜಿಕ-ಆರ್ಥಿಕ ಎಂದು ಬರೆಯುವುದೇ ಒಳ್ಳೆಯದು
====
೨. Prejudice ಎಂಬ ಅರ್ಥವಾದ್ದರಿಂದ ‘ಪೂರ್ವಗ್ರಹ’ ಸರಿಪೂರ್ವಾಗ್ರಹ ತಪ್ಪು.

ಇಂಗ್ಲಿಷ್‌ನಲ್ಲಿ Prejudice ಎಂಬ ಪದ ಬಳಕೆಯಾಗುತ್ತದೆ. ‘preconceived opinion that is not based on reason or actual experience’ ಎಂದು ಅರ್ಥ. ಅಂದರೆಒಂದು ವಸ್ತು/ವಿಷಯ/ವ್ಯಕ್ತಿಯ ಬಗ್ಗೆ ಯಾವೊಂದೂಅನುಭವವಿಲ್ಲದೆಕಾರಣವಿಲ್ಲದೆನಿರ್ದಿಷ್ಟವಾದೊಂದು ಅಭಿಪ್ರಾಯವನ್ನು ಹೊಂದಿರುವುದು. ಇಂಗ್ಲಿಷ್ ಭಾಷೆಗೆ ಈ ಪದ ಬಂದಿರುವುದು 'Prae' (ಮೊದಲೇ, in advance ಎಂಬ ಅರ್ಥದ) ಲ್ಯಾಟಿನ್ ಪದಮತ್ತು judicium (judgment ಎಂಬ ಅರ್ಥದ) ಇನ್ನೊಂದು ಲ್ಯಾಟಿನ್ ಪದ ಸೇರಿದಾಗಿನ Praejudicium ಎಂಬ ಲ್ಯಾಟಿನ್ ರೂಪದಿಂದ.

ಈಗ ‘ಪೂರ್ವಗ್ರಹ’ ಎಂಬ ಪದವನ್ನು ಗಮನಿಸೋಣ. ಅದರಲ್ಲಿನ ‘ಪೂರ್ವ’ ಎಂಬುದು ‘ಮೊದಲೇ’, ‘ಮುಂಚಿತವಾಗಿ’ ಅಥವಾ ‘in advance’ ಎಂಬ ಅರ್ಥದಲ್ಲಿದೆ. ಗ್ರಹ ಎಂಬ ಭಾಗವು ಗ್ರಹಣ ಅಥವಾ ಗ್ರಹಿಕೆಯ ಹ್ರಸ್ವ ರೂಪ. ಹಿಡಿದಿಟ್ಟುಕೊಳ್ಳುವಿಕೆ ಎಂಬ ಸ್ಥೂಲ ಅರ್ಥ. (‘ಗ್ರಹ’ದ ಈ ಅರ್ಥವನ್ನು ಅರ್ಥ ಮಾಡಿಕೊಳ್ಳಲು ನಿಗ್ರಹ ಎಂಬ ಪದದ ‘ಸ್ವೀಕಾರ ಮಾಡದಿರುವಿಕೆ’ ಅರ್ಥವನ್ನು ನೆರವಿಗೆ ಪಡೆಯಬಹುದು. ಸಂಗ್ರಹ ಸಹ ‘ಗ್ರಹ’ ಧಾತುವಿನಿಂದಲೇಬಂದದ್ದು). ‘ಪೂರ್ವ’ ಮತ್ತು ‘ಗ್ರಹ’ ಒಟ್ಟು ಸೇರಿದರೆ ‘ಮುಂಚಿತವಾಗಿ ಹಿಡಿದಿಟ್ಟುಕೊಳ್ಳುವುದು’ ಎಂದು ಅರ್ಥೈಸಬಹುದು. ಪೂರ್ವಗ್ರಹ ಪ್ರದರ್ಶಿಸುವಾಗೆಲ್ಲ ನಾವು ಹಾಗೇ ತಾನೆ ಮಾಡುವುದುಒಂದು ವಸ್ತು/ವಿಷಯ/ವ್ಯಕ್ತಿಯ ಬಗ್ಗೆ ಯಾವೊಂದೂ ಅನುಭವವಿಲ್ಲದೆಕಾರಣವಿಲ್ಲದೆನಿರ್ದಿಷ್ಟವಾದೊಂದು ಅಭಿಪ್ರಾಯವನ್ನು ರೂಪಿಸಿ ಹಿಡಿದಿಟ್ಟುಕೊಳ್ಳುವುದು. ಎಷ್ಟೋ ಸಂದರ್ಭಗಳಲ್ಲಿ ಅದು ನಿಜ ಆಗಿರುವುದಿಲ್ಲ!

ಇನ್ನು, ‘ಪೂರ್ವಾಗ್ರಹ’ವೇ ಸರಿ ಎನ್ನುವವರ ವಾದವನ್ನು ಒಪ್ಪುವುದಾದರೂ ಹೇಗೆ? ‘ಪೂರ್ವ’ ಭಾಗವನ್ನೇನೋ ಒಪ್ಪಬಹುದು. ಆದರೆ ‘ಆಗ್ರಹ’ (ಬಲವಂತಸಿಟ್ಟಿನಿಂದ ಕೂಡಿದ ಒತ್ತಾಯ) ಏನಿದೆ ಅದರಲ್ಲಿಪೂರ್ವ+ಅಗ್ರಹಎಂದು ಸಂಧಿ ಬಿಡಿಸಿದರೂ ಸರಿಯಾಗುವುದಿಲ್ಲ. ‘ಅಗ್ರಹ’ ಎಂದರೆ ತಿಳಿವಳಿಕೆಯಿಲ್ಲದ ಅಂತಾದ್ದರಿಂದ ವಿರೋಧಾರ್ಥ ಬರುತ್ತದೆ. ಹಾಗಾಗಿ ‘ಪೂರ್ವಗ್ರಹ’ ಎಂಬ ರೂಪವೇ ವ್ಯಾಕರಣಬದ್ಧವಾದದ್ದು. ಕರ್ಮಧಾರಯ ಸಮಾಸದಿಂದ ಆಗಿರುವಂಥದ್ದು.

====
೩. ಮಹಾಪ್ರಾಣ ಇರಬಹುದೇನೋ ಎಂದುಕೊಂಡು ತಪ್ಪಾಗುವ ಪದಗಳು :

ಅ) ವಿಪುಲ (ಅಧಿಕವಾಗಿರುವ) ಸರಿ. ವಿಫುಲ ತಪ್ಪು.
ಆ) ಸಿಂದೂರ (ಕುಂಕುಮ) ಸರಿ. ಸಿಂಧೂರ ತಪ್ಪು.
ಇ) ಅವಗಡ (ಅಪಘಾತ) ಸರಿ. ಅವಘಡ ಅಥವಾ ಅವಘಢ ಎಂದು ಬರೆದರೆ ತಪ್ಪು.
ಈ)  ಬೀಭತ್ಸ (ನವರಸಗಳಲ್ಲೊಂದು) ಸರಿ. ಭೀಭತ್ಸ ತಪ್ಪು.
ಉ)  ದಾಳಿ (ಆಕ್ರಮಣ) ಸರಿ. ಧಾಳಿ ತಪ್ಪು.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
 FEEDBACK: samarasasudhi@gmail.com


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries