ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಆಟಿದ ನೆಂಪು ಕಾರ್ಯಕ್ರಮ ಹಾಗು ಜಿಲ್ಲಾ ಕುಲಾಲ ವಿದ್ಯಾರ್ಥಿ ಘಟಕದ ಉದ್ಘಾಟನಾ ಕಾರ್ಯಕ್ರಮ ಜು.28 ರಂದು ಭಾನುವಾರ ಬೆಳಿಗ್ಗೆ 10 ಕ್ಕೆ ಹೊಸಬೆಟ್ಟಿನ ಕುಲಾಲ ಸಮಾಜ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ರಿಂದ ವಿದ್ಯಾರ್ಥಿಗಳ ನೊಂದಾವಣೆ ಮತ್ತು ಮಾಹಿತಿ ಕಾರ್ಯಾಗಾರ ನಡೆಯಲಿದ್ದು, 11 ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸುವರು. ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ಇದರ ಸಂಯೋಜಕ ಡಾ.ಯತೀಶ್ ಕುಮಾರ್ ಮಂಗಳೂರು ಉದ್ಘಾಟಿಸುವರು. ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಶ್ವೇತಲತಾ ದೈಗೋಳಿ ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯೇಶ್ ಗೋವಿಂದ ಸುರತ್ಕಲ್, ಈಶ್ವರ ಕುಲಾಲ್ ಕಣ್ವತೀರ್ಥ, ಪುರುಷೋತ್ತಮ ಸಾಲ್ಯಾನ್ ಸಾಂತ್‍ಪಾಲು, ಸೇಸಪ್ಪ ಮೂಲ್ಯ, ಸೇಸಪ್ಪ ಅರಿಂಗುಳ, ಗಂಗಾಧರ ಬಂಜನ್ ಕುಳಾಯಿ, ಗಿರಿಜಾ ಎಸ್.ಬಂಗೇರ ಹೊಸಬೆಟ್ಟು ಮೊದಲಾದವರು ಭಾಗವಹಿಸುವರು. ಸಭಾ ಕಾರ್ಯಕ್ರಮದ ನಂತರ ಆಟಿ ತಿಂಗಳ ವಿಶೇಷ ತಿನಸುಗಳೊಂದಿಗೆ ಸಹಭೋಜನದ ವ್ಯವಸ್ಥೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಲಾಲ ಸಮಾಜ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಕುಲಾಲ ಸಂಘದ ಪ್ರಕಟನೆಯಲ್ಲಿ ತಿಳಿಸಿದೆ.

