ಉಪ್ಪಳ: ಕುರುಡಪದವು ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಹಾಗು ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಜು.28 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕುರುಡಪದವು ಕೆ.ವಿ.ಎಸ್.ಎಂ. ಹೈಸ್ಕೂಲ್‍ನಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ.
ಶಿಬಿರವನ್ನು ಡಾ.ರಾಜ್ ರಾಮ್ ಭಟ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಗೋಪಾಲಕೃಷ್ಣ ಭಟ್ ಕುರಿಯ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಸದಸ್ಯೆ ತಾರಾ ವಿ.ಶೆಟ್ಟಿ, ಕಡಂಬಾರು ಶಾಲೆ ಅಧ್ಯಾಪಕ ಅಬೂಬಕ್ಕರ್ ಕುರುಡಪದವು, ಕುರುಡಪದವಿನ ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಸೇತುಲಕ್ಷ್ಮೀ ಕೆ.ಸಿ. ಉಪಸ್ಥಿತರಿರುವರು.

