ಮಧೂರು: ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಯೊಂದಿಗೆ ಸಕ್ರಿಯವಾಗಿರುವ ಮಧೂರಿನ ಮಿತ್ರಕಲಾವೃಂದದ 33 ನೇ ವರ್ಷದ ಮುಕ್ತ ಚೆಸ್ ಪಂದ್ಯಾಟ ಆ. 4 ರಂದು ಜರಗಲಿದೆ. ಮಧೂರು ಸರ್ಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಬೆಳಿಗ್ಗೆ 10 ರಿಂದ ಪಂದ್ಯಾಟ ಪ್ರಾರಂಭವಾಗಲಿದ್ದು, ಸ್ಪರ್ಧಾಳುಗಳು 10 ಗಂಟೆಯ ಮುಂಚಿತವಾಗಿ ಪ್ರವೇಶ ಶುಲ್ಕದೊಂದಿಗೆ ಹೆಸರು ನೊಂದಾಯಿಸಿಕೊಳ್ಳಬಹುದು.
ಚೆಸ್ ಸ್ಪರ್ಧೆಯಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗವಿರುವುದು. ವಿಜೇತರಾದವರಿಗೆ ನಗದು ಮತ್ತು ಪಾರಿತೋಷಕ ನೀಡಲಾಗುವುದು. ಕಳೆದ 32 ವರ್ಷಗಳಿಂದ ಮಿತ್ರ ಕಲಾವೃಂದದ ವತಿಯಿಂದ ಚೆಸ್ ಪಂದ್ಯಾಟ ನಡೆಯುತ್ತಿದ್ದು ಕೇರಳ, ಕರ್ನಾಟಕದ ಸ್ಪರ್ಧಾಳುಗಳು ಭಾಗವಹಿಸುತ್ತಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊಬೈಲ್ 9895117658, 9895508201, 9895329548 ಸಂಖ್ಯೆ ಸಂಪರ್ಕಿಸಬಹುದೆಂದು ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.


