ಮಂಜೇಶ್ವರ: ಶ್ರೀ ಜಲದುರ್ಗಾ ಪರಮೇಶ್ವರೀ ದೇವಸ್ಥಾನ ಪಡ್ಪು ಆನೆಕಲ್ಲು ಹಾಗೂ ಶ್ರೀ ಸಾಯಿ ಪ್ರತಿಷ್ಠಾನ ದೈಗೋಳಿ ಇದರ ಜಂಟಿ ಆಶ್ರಯದಲ್ಲಿ ಸಂಚಾರಿ ನೇತ್ರಾ ಚಿಕಿತ್ಸಾ ಘಟಕ ಮಂಗಳೂರು ಇದರ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸ ಶಿಬಿರವು ಶ್ರೀ ಜಲದುರ್ಗಾ ಪರಮೇಶ್ವರೀ ದೇವಸ್ಥಾನದ ಸಭಾ ಮಂಟಪ ಪಡ್ಪುನಲ್ಲಿ ಇತ್ತೀಚೆಗೆ ನಡೆಯಿತು.
ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆಗೈದ ಸರ್ಕಾರಿ ಆಸ್ಪತ್ರೆ ಬಂಟ್ವಾಳ ಇದರ ನೇತ್ರಾಧಿಕಾರಿ ಶಾಂತರಾಜ್ ಶಿಬಿರದ ಸದುದ್ದೇಶವನ್ನು ವಿವರಿಸಿದರು. ಡಾ.ದೈವೇಶ್ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಡಾ.ಶ್ರೀಮತಿ, ಡಾ.ಸವಿತಾ ಕುಲಕರ್ಣಿ ನೇತ್ರಾಧಿಕಾರಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆ ಮಂಗಳೂರು, ಡಾ. ಉದಯಕುಮಾರ್ ಶ್ರೀ ಸಾಯಿ ಪ್ರತಿಷ್ಥಾನ ದೈಗೋಳಿ,ಶ್ರೀಕ್ಷೇತ್ರದ ಧರ್ಮದರ್ಶಿ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈದ್ಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಒ.ಶ್ಯಾಮ್ ಭಟ್ ಹಾಗೂ ಶ್ರೀ ಸಾಯಿ ಪ್ರತಿಷ್ಠಾನ ದೈಗೋಳಿ ಇದರ ಪ್ರಧಾನ ಸಂಚಾಲಕ ಡಾ.ಉದಯಕುಮಾರ್ ಅವರ ಸಹಕಾರದೊಂದಿಗೆ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರವು ಯಶಸ್ವಿಯಾಯಿತು. ಕಣ್ಣಿನ ದೋಷವಿದ್ದ ಸುಮಾರು 110 ಮಂದಿ ಚಿಕಿತ್ಸೆ ಪಡೆದುಕೊಂಡರು. 52 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಹಾಗೂ 4 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದ ಮೊದಲಿಗೆ ಕಾವ್ಯ, ಅನನ್ಯ, ಚೈತನ್ಯ ಪ್ರಾರ್ಥಿಸಿದರು. ಧರ್ಮದರ್ಶಿ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ, ಸ0ಚಾಲಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.


