ಮಂಜೇಶ್ವರ: ಹಿರಿಯ ಪ್ರಾದ್ಯಾಪಕ, ಸಾಹಿತಿ ಟಿ.ಎ.ಎನ್.ಖಂಡಿಗೆ ಹಾಗೂ ಸಾಹಿತ್ಯ ಸ್ನೇಹಿತರು ಮುನ್ನಡೆಸುತ್ತಿರುವ ಈಹೊತ್ತಿಗೆ ಈ ಹೊತ್ತಗೆ ಶಿರೋನಾಮೆಯಡಿ ಮುನ್ನಡೆಸುತ್ತಿರುವ ಇತ್ತೀಚೆಗಿನ ಕನ್ನಡದ ಶ್ರೇಷ್ಠ ಕಕೃತಿಗಳ ವಿಮರ್ಸೆ-ಸಂವಾದ ಸರಣಿಯ 9ನೇ ಕಾರ್ಯಕ್ರಮ ಇಂದು ಅಪರಾಹ್ನ 3.30 ರಿಂದ ಸಿದ್ದಕಟ್ಟೆ ಚರ್ಚ್ ಸನಿಹದ ಪಿಂಕಿ ಟವರ್ಸ್ ಸಭಾ ಭವನದಲ್ಲಿ ನಡೆಯಲಿದೆ.
ಇಂದಿನ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಷ.ಶೆಟ್ಟರ್ ಅವರ "ಶಂಗಂ ತಮಿಳಗಂ" ಮತ್ತು "ಕನ್ನಡ ನಾಡು ನುಡಿ" ಕೃತಿಯ ಬಗ್ಗೆ ವಿಮರ್ಶೆ ಸಂವಾದ ನಡೆಯಲಿದೆ. ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ, ಚಿಂತಕ, ಲೇಖಕ ಡಾ.ಸುಬ್ರಹ್ಮಣ್ಯ ಭಟ್ ಕೃತಿ ಸ್ಪಂದನ ನಡೆಸುವರು. ಸಂಯೋಜಕ ಟಿ.ಎ.ಎನ್.ಖಂಡಿಗೆ, ಕವಿತಾ ಟಿ.ಎ.ಎನ್.ಖಂಡಿಗೆ, ಭರತ್ ಕುಮಾರ್ ಸಿದ್ದಕಟ್ಟೆ,ಸಾಹಿತ್ಯ ಪ್ರೇಮಿಗಳು ಭಾಗವಹಿಸುವರು.


