ಪೆಲ9: ಮಕ್ಕಳು ಖಾಲಿ ಕೊಡವಲ್ಲ, ಒಂದಲ್ಲ ಒಂದು ವಿದ್ಯೆಯಿಂದ ಸಂಪನ್ನರಾಗಿದ್ದು ಅವರ ನಾಡಿಮಿಡಿತವನ್ನು ಅರಿತು ಸೂಕ್ತ ಅರಿವನ್ನು ನೀಡಲು ಶಿಕ್ಷಕರಷ್ಟೆ ಹೆತ್ತವರಿಗೂ ಜವಾಬ್ದಾರಿ ಇದೆ. ಮನೆಯೇ ಮೊದಲ ಪಾಠಶಾಲೆ ಎಂದು ಹಿರಿಯರು ಹೇಳಿದ ಒಳಾಥ9ವನ್ನು ತಿಳಿದು ಮನೆಯಿಂದಲೇ ಸಂಸ್ಕಾರಯುತರಾಗಬೇಕು. ಪ್ರತೀ ಮಗುವಿನ ಕಲಿಕಾ ಪ್ರಗತಿಗಾಗಿ ಶ್ರಮಿಸುವ ಒಗ್ಗಟ್ಟಿನ ಶಿಕ್ಷಕವೃಂದ ಇಲ್ಲಿ ಕಾಯ9 ಪ್ರವೃತ್ತವಾಗುತ್ತಿದೆ. ಹೆತ್ತವರು ಪೋತ್ಸಾಹಿಸಿ ಶಿಕ್ಷಣದ ಮಹಾನ್ ಉದ್ದೇಶ ಮಗುವಿನ ಸೃಜನಾತ್ಮಕ ಬೆಳವಣಿಗೆಯಲ್ಲಿ ಪಾತ್ರರಾಗಬೇಕು ಎಂದು ಶ್ರೀ ಸತ್ಯನಾರಾಯಣ ವಿದ್ಯಾವಧ9ಕ ಸಂಘದ ಅಧ್ಯಕ್ಷರಾದ ಬಿ.ಜಿ ರಾಮ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆಲ9 ಶ್ರೀಸತ್ಯನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಮಹಾಸಭೆಯನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಅಧ್ಯಕ್ಷತೆ ವಹಿಸಿ ಈ ಶೈಕ್ಷಣಿಕ ವಷ9ದ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಶಾಲಾ ವರದಿಯನ್ನು ಮಂಡಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಅಮಿಗೊ, ಮಾತೃಸಂಘದ ಅಧ್ಯಕ್ಷೆ ಉಷಾ ಅಮೆಕ್ಕಳ, ಮಧ್ಯಾಹ್ನದೂಟ ವ್ಯವಸ್ಥೆಯ ಅಧ್ಯಕ್ಷ ರಾಧಾಕೃಷ್ಣ ಭಟ್ ಹಾಗೂ ಸಿ.ಆರ್.ಸಿ ಸಂಯೋಜಕ ಸುರೇಶ್ ಕಾಟುಕುಕ್ಕೆ ಉಪಸ್ಥಿತರಿದ್ದರು. 2019-20 ರ ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಶ್ರಫ್ ಅಮಿಗೊ, ಉಪಾಧ್ಯಕ್ಷರಾಗಿ ಸುಬ್ರಮ್ಮಣ್ಯ ಭಟ್ ಕೋಡ್ಮಾಡ್ ಪುನಾರಾಯ್ಕೆಯಾದರು. ಮಾತೃಸಂಘದ ಅಧ್ಯಕ್ಷೆಯಾಗಿ ಹಷಿ9ತಾ ಕಾಟುಕುಕ್ಕೆ, ಉಪಾಧ್ಯಕ್ಷೆಯಾಗಿ ಇಂದಿರಾ ಪೆಲ9, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಪೆಲ9, ಉಪಾಧ್ಯಕ್ಷರಾಗಿ ಶೀನ ಅಪ್ಪಯ್ಯಮೂಲೆ ಪುನರಾಯ್ಕೆಯಾದರು. ಕೋಟೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸುಶೀಲಾ ವಂದಿಸಿದರು.ಶಿಕ್ಷಕಿ ಕಲಂದರ್ ಬೀಬಿ ಹಾಗೂ ಉದಯ ಸಾರಂಗ್ ಕಾಯ9ಕ್ರಮ ನಿರೂಪಿಸಿದರು.


