ಕುಂಬಳೆ: ತಿರುವನಂತಪುರ ಸೆಕ್ರಟರಿಯೇಟ್ ಧರಣಿ ನಿರತ ಯುವಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ ಹಾಗೂ ಲೋಕಸೇವಾ ಆಯೋಗ(ಪಿಎಸ್ಸಿ)ದ ಅಂಕಪಟ್ಟಿಯಲ್ಲಿನ ಅವ್ಯವಹಾರ ಖಂಡಿಸಿ ಮಂಜೇಶ್ವರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕುಂಬಳೆ ಸಿಐ ಕಛೇರಿಗೆ ಬುಧವಾರ ಮುತ್ತಿಗೆ ಹಾಕಲಾಯಿತು.
ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಕುಂಬಳೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಭಂಡಾರಿ, ದಿವಾಕರ್ ಎಸ್.ಜೆ, ರವಿ ಪೂಜಾರಿ, ಶಾನಿದ್ ಕಯ್ಯಾಂಕೂಡೇಲು, ಲಕ್ಷ್ಮಣ ಪ್ರಭು, ಇಕ್ಬಾಲ್ ಕಳಿಯೂರು, ಇರ್ಷಾದ್ ಕಳಿಯೂರು, ನಾರಾಯಣ ಏದಾರು, ಶರೀಫ್ ಅರಿಬೈಲು, ಸಲೀಂ ಕಟ್ಟತ್ತಡ್ಕ, ಆಬಿದ್ ಎಡಚೇರಿ, ಆರಿಫ್ ಮಚ್ಚಂಪಾಡಿ, ಡೋಲ್ಫಿ ಡಿ.ಸೋಜಾ, ಲೋಕನಾಥ ಶೆಟ್ಟಿ, ಯೂಸುಫ್ ಮಿಲಾನೊ ಮುಂತಾದವರು ಉಪಸ್ಥಿತರಿದ್ದರು. ಶರೀಫ್ ಪಿ.ಕೆ.ನಗರ ಸ್ವಾಗತಿಸಿ, ನಿಸಾರ್ ಆರಿಕ್ಕಾಡಿ ವಂದಿಸಿದರು.


