ಮುಳ್ಳೇರಿಯ: ಇಲ್ಲಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಕ್ಲಬ್, ಕೇರಳ ಸಾರ್ವಜನಿಕ ಅರಣ್ಯ ಇಲಾಖೆ, ಹರಿತ ಕೇರಳ ಮಿಷನ್‍ನ ಸಂಯುಕ್ತ ಆಶ್ರಯದಲ್ಲಿ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಕುಂಬ್ಡಾಜೆ, ಮವ್ವಾರು, ಕುರುಮಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಪರಿಸರದಲ್ಲಿ ಗಿಡಗಳನ್ನು ನಡೆಲಾಯಿತು.
ಲಕ್ಷ್ಮಿತರು, ಪೇರಳೆ, ಕೊನ್ನೆ, ನೆಲ್ಲಿ, ಬಿದಿರು, ಬೇವು ಮೊದಲಾದ ಗಿಡಗಳನ್ನು ನೆಡಲಾಯಿತು. ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಗಿಡಗಳನ್ನು ವಿತರಿಸಲಾಯಿತು. ಭಜನಾ ಮಂದಿರ ಸಮಿತಿ ಅಧ್ಯಕ್ಷ ರಮೇಶ್ ಶರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ದಯಾನಂದ ಬಳಕ್ಕ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಅಶೋಕ್ ಅರಳಿತ್ತಾಯ, ಸಾವಿತ್ರಿ ಟೀಚರ್, ಶಿಕ್ಷಕ ಗುರುವಾಯುರಪ್ಪ ಭಟ್, ರವೀಶ ಕುರುಮಜ್ಜಿಕಟ್ಟೆ ಉಪಸ್ಥಿತರಿದ್ದರು.


