ಬದಿಯಡ್ಕ: ಚಂದ್ರನ ಮೇಲೆ ಮಾನವ ಮೊದಲ ಬಾರಿ ಕಾಲಿಟ್ಟ ಕ್ಷಣಕ್ಕೆ ಚಿನ್ನದ ಹಬ್ಬ ಆಚರಣೆ ಸಹಿತ ಭಾರತದ ಯಶಸ್ವೀ ಚಂದ್ರಯಾನ 2ರ ಉಡಾವಣಾ ಸಂಭ್ರಮವು ಪೆರಡಾಲ ಸರಕಾರೀ ಪ್ರೌಢಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಮೇಳೈಸಿತು.
ಬೆಳಗ್ಗೆ ಶಾಲಾ ಪ್ರಾರ್ಥನೆಯ ಸಂದರ್ಭದಲ್ಲಿ ನೀಲ್ಅರ್ಮ್ಸ್ಟ್ರಾಂಗ್, ಕೋಲಿನ್ಸ್, ಆಲ್ಡರಿನ್ ವೇಷಧಾರಿಗಳು ಬಂದು ಬಾಹ್ಯಾಕಾಶದ ಅನುಭವ ಪರಿಚಯಿಸಿದರು. ರೋಹಿತಾಕ್ಷ, ಹಾಶಿಮ್, ಹಸನ್ ಭಾಗವಹಿಸಿದ್ದರು. ನಂದನ ಹಾಗೂ ಬಳಗ, ಗೀತಾಶ್ರೀ ಹಾಗೂ ತಂಡದವರು ಹಾಡಿನ ಮೂಲಕ ಚಂದ್ರನನ್ನು ವರ್ಣಿಸಿದರು. ಭಾಗ್ಯಶ್ರೀ ಭಾಷಣ ಮಾಡಿ ಚಂದ್ರಾನ್ವೇಷಣೆಯ ವಿವರಣೆಯಿತ್ತರು. ಮುಖ್ಯಶಿಕ್ಷಕ ರಾಜಗೋಪಾಲ ಶುಭಾಶಂಸನೆಗೈದರು. ಶಿಕ್ಷಕ ಪ್ರಮೋದ್ಚಂದ್ರ ದಿನದ ಮಹತ್ವ ವಿವರಿಸಿದರು. ಶ್ರೀಧರ ಭಟ್ ಭಾರತೀಯ ಚಾಂದ್ರಯಾನದ ಮಜಲನ್ನು ಮಂಡಿಸಿದರು. ತರಗತಿ ವಾರು ಚಾರ್ಟ್ ತಯಾರಿ,ರಸಪ್ರಶ್ನೆ ಸ್ಪರ್ಧೆ, ವಿಡಿಯೋಪ್ರದರ್ಶನ ಏರ್ಪಡಿಸಲಾಯಿತು. ಶಿಕ್ಷಕ ಗೋಪಾಲಕೃಷ್ಣ ಭಟ್ ವಂದಿಸಿದರು. ವಿಜ್ಞಾನ ಕ್ಲಬ್ನ ಸಿಜಿ ಥಾಮಸ್ ಆಯೋೀಜಿಸಿದ ಕಾರ್ಯಕ್ರಮಕ್ಕೆ ಜಯಲತಾ, ಆಲ್ವಿನ್, ಬಿನೋಯ್, ಬಿಂದಿಯಾ, ಲಲಿತಾಂಬಾ, ರಿಶಾದ್, ಪಲ್ಲವಿ, ದೀಕ್ಷಿತಾ, ದಿವ್ಯಗಂಗಾ, ದುರ್ಗಾಪರಮೇಶ್ವರಿ, ವಿದ್ಯಾ, ಸಂಧ್ಯಾ ಸಹಕರಿಸಿದರು.


