ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಭಜರಂಗದಳ ವರ್ಕಾಡಿ ಖಂಡ ಸಮಿತಿಯ ಸಭೆ ಇತ್ತೀಚೆಗೆ ವರ್ಕಾಡಿ ಪಂಪ್ವೆಲ್ ನಲ್ಲಿ ಗೋಪಾಲ ಶೆಟ್ಟಿ ಅರಿಬೈಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೋಹತ್ಯೆ, ಮತಾಂತರ, ಭಯೋತ್ಪಾದನೆ, ಹಿಂದೂ ದೈವ-ದೇವರುಗಳ ಅವಹೇಳನದ ವಿರುದ್ದ ವರ್ಕಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗೃತ ಹಿಂದೂ ಸಮಾವೇಶವೊಂದನ್ನು ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಹಿಂಪ ವರ್ಕಾಡಿ ಖಂಡ ಸಮಿತಿ ಅಧ್ಯಕ್ಷ ಶೇಷಪ್ಪ ಅರಿಂಗುಳ, ಕಾರ್ಯದರ್ಶಿ ಯತಿರಾಜ್ ಕೆದುಂಬಾಡಿ, ಭಜರಂಗದಳದ ಸಂಚಾಲಕ ರಾಘವೇಂದ್ರ ಮಯ್ಯ ದೈಗೋಳಿ, ಸಂತೋಷ್ ದೈಗೋಳಿ, ಗೋವಿಂದ ರಾಮ ಭಟ್ ಕಣಕೂರು, ಅಚ್ಚುತ ಅರಿಬೈಲು, ಸಂಪತ್ ವರ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.


