ಕಾಸರಗೋಡು: ಭಾರತೀಯ ನೌಕಾದಳದ ನಿವೃತ್ತ ಸೈನಿಕರ ವಿಧವೆಯರ ಸಂಗಮ ಕಾರ್ಯಕ್ರಮ ಆ.22ರಂದು ಕಾಸರಗೋಡು ಜಿಲ್ಲಾ ಸೈನಿಕಕಲ್ಯಾಣ ಕಚೇರಿಯಲ್ಲಿ ಜರುಗಲಿದೆ.
ಐ.ಎನ್.ಎಸ್.ಸಾಮೋರಿನ್ ಏಳಿಮಲೆ ನೇತೃತ್ವದಲ್ಲಿ ನಿವೃತ್ತ ಸೈನಿಕರ ವಿಧವೆಯರ ಕಲ್ಯಾಣ ಚಟುವಟಿಕೆ, ಸಮಸ್ಯೆಗಳಪರಿಹಾರ, ಪಿಂಚಣಿ ಸಹಿತ ವಿಚಾರಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಜರುಗಲಿದೆ.
ಬೆಳಿಗ್ಗೆ 11 ಗಂಟೆಯಿಂದ 12 ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅರ್ಹರಾದವರು ಗರಿಷ್ಠ ಮಟ್ಟದಲ್ಲಿ ಭಾಗವಹಿಸುವಂತೆ ಜಿಲ್ಲಾ ಸೈನಿಕಕಲ್ಯಾಣ ಅಧಿಕಾರಿ ತಿಳಿಸಿದರು. ಮಾಹಿತಿಗೆ ದೂರವಾಣಿ ಸಂಖ್ಯೆ: 04994256860.

