ಕಾಸರಗೋಡು: ಡಿಫೆನ್ಸ್ ಪೆನ್ಶನ್ ಡಿಸ್ ಬೆಸಿರ್ಂಗ್ ಸಿಂಗ್ ಕಚೇರಿ ವತಿಯಿಂದ ಕಣ್ಣೂರು ಡಿ.ಪಿ.ಡಿ.ಒ. ಕಚೇರಿಯಲ್ಲಿ ಆ.23ರಂದು ಮಿನಿ ಡಿಫೆನ್ಸ್ ಪಿಂಚಣಿ ಅದಾಲತ್ ನಡೆಯಲಿದೆ. ಡಿ.ಪಿ.ಡಿ.ಒ. ಮೂಲಕ, ಬ್ಯಾಂಕ್ ಮೂಲಕ ಡಿಫೆನ್ಸ್ ಪಿಂಚಣಿ ಪಡೆಯುತ್ತಿರುವ ಜಿಲ್ಲೆಯ ನಿವೃತ್ತ ಸೈನಿಕರಿಗೆ, ವಿಧವೆಯರಿಗೆ ಮತ್ತು ಆಶ್ರಿತರಿಗೆ ಪಿಂಚಣಿ ಸಂಬಂಧ ಸಮಸ್ಯೆಗಳಿದ್ದಲ್ಲಿ ಪರಿಹರಿಸುವ
ನಿಟ್ಟಿನಲ್ಲಿ ಅದಾಲತ್ ನಡೆಯಲಿದೆ. ಅದಾಲತ್ ನಲ್ಲಿ ಹಾಜರುಪಡಿಸಬೇಕಾದ ಫಾರಂ ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಲ್ಲಿ ಲಭ್ಯವಿದೆ. ಹೆಚ್ಚಿನಮಾಹಿತಿಗೆ ಕಣ್ಣೂರು ಡಿ.ಪಿ.ಡಿ.ಒ. ಕಚೇರಿ ಯಾ 04972764070 ಎಂಬ ದೂರವಾಣಿ ನಂಬ್ರಕ್ಕೆ ಯಾ ಕಾಸರಗೋಡು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿ(0499425686) ಯನ್ನು ಸಂಪರ್ಕಿಸಬಹುದು.

